Logo

VHP PUBLICATIONS

Hindu Vani


expand_more

ವಿಮರ್ಶೆ

By - ವೆಂಕಟರಾಮಯ್ಯ, ಪಾವಗಡ

ಶಬ್ದಾಡಂಬರವೆಂದು ಕರೆದ

ಸೋಶಿಯಲಿಸ್ಟ್ ಮತ್ತು ಸೆಕ್ಯುಲರ್ ಶಬ್ದಗಳು

ವಿಮರ್ಶೆ

ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತ ರಾಜ್ಯಾಂಗ ರಚನಾ ಸಭೆಗೆ ಪ್ರಾಂತೀಯ ವಿಧಾನ ಸಭೆಗಳು ಸದಸ್ಯರನ್ನು ಆರಿಸಿದವು. ಕಾಂಗ್ರೆಸ್ಸಿನ ವಿರೋಧದಿಂದಾಗಿ ಅಂಬೇಡ್ಕರ್ ಅವರು ಮುಂಬಯಿ ವಿಧಾನ ಸಭೆಯಿಂದ ರಾಜ್ಯಾಂಗ ರಚನಾ ಸಭೆಗೆ ಆಯ್ಕೆಯಾಗದೆ ಹೋದರು. ಕೊನೆಗೆ CONSTITUTION or INDIA ಅವರು ಬಂಗಾಳ ವಿಧಾನ ಸಭೆಯಿಂದ ಸ್ನೇಹಿತರ ಸಹಕಾರದಿಂದ ಆರಿಸಿ ಬರಬೇಕಾಯಿತು. ರಾಜ್ಯಾಂಗ ಸಭೆಯು 1946ರ ಡಿಸೆಂಬರ್ 9 ರಂದು ಮೊದಲ ಸಾರಿ ಸಭೆ ಸೇರಿತು. ಡಾ| ರಾಜೇಂದ್ರಪ್ರಸಾದ್‌ ಅಧ್ಯಕ್ಷರಾಗಿ ಆಯ್ಕೆಯಾದರು.

1946ರ ಡಿಸೆಂಬರ್ 13ರ ಸಭೆಯಲ್ಲಿ ಜವಹರ್‌ಲಾಲ್ ನೆಹರೂರವರು ಸಂವಿಧಾನದ ಧೈಯೋದ್ದೇಶಗಳ ಕುರಿತು ನಿರ್ಣಯವನ್ನು ಮಂಡಿಸಿದರು. ಅವರು ಮುಂದಿಟ್ಟ 8 ಬಿಂದುಗಳ ನಿರ್ಣಯದಲ್ಲಿ ಮೊದಲನೇ ಬಿಂದುವೇ ಇಂದಿನ ಈ ಲೇಖನದಲ್ಲಿ ಚರ್ಚಿಸಿರುವ ವಿಚಾರದ ಕೇಂದ್ರವಾಗಿದೆ.

ಅವರು ಮಂಡಿಸಿದ ನಿರ್ಣಯಗಳು ಕೆಳಕಂಡಂತೆ ಇದ್ದಿತು.

“ಈ ರಾಜ್ಯಾಂಗ ಸಭೆಯು ಭಾರತವನ್ನು ಒಂದು ಸ್ವತಂತ್ರ, ಸಾರ್ವಭೌಮ, ಗಣರಾಜ್ಯವೆಂದು ಘೋಷಿಸಬೇಕೆಂದೂ ಮುಂದೆ ಆಡಳಿತಕ್ಕಾಗಿ ಒಂದು ಸಂವಿಧಾನವನ್ನು ರಚಿಸಬೇಕೆಂದೂ ನಿರ್ಣಯಿಸುತ್ತದೆ” ಎಂದು. ಇದರೊಂದಿಗೆ ಇನ್ನೂ ನಿರ್ಣಯಗಳ ಏಳು ಬಿಂದುಗಳಿದ್ದವು. 1946ರ ಡಿಸೆಂಬರ್ 16ರಂದು ಸೇರಿದ ಸಭೆಯಲ್ಲಿ ಮುಂಬಯಿ ಪ್ರಾಂತದಿಂದ ಆಯ್ಕೆಯಾದ ರೈಟ್‌ಆನರೆಬಲ್ ಡಾ. ಎಂ.ಆರ್. ಜಯಕರರವರು ಇದಕ್ಕೆ ತಮ್ಮ ತಿದ್ದುಪಡಿಯನ್ನು ಇಚ್ಚಿಸಿದರು. ಅದಕ್ಕಾಗಿ ಅವರು “ಈ ಸಭೆಯು ದೃಢ ಮತ್ತು ಗಂಭೀರವಾದ ಈ ನಿರ್ಣಯವನ್ನು ಕೈಗೊಳ್ಳುತ್ತದೆ. ಈ ಸಭೆಯು ಮುಂದೆ ಭಾರತದ ಆಡಳಿತ ನಿರ್ವಹಣೆಗಾಗಿ ಸಿದ್ಧಪಡಿಸುವ ಸಂವಿಧಾನವು ಒಂದು ಸ್ವತಂತ್ರವೂ ಪ್ರಜಾಸತ್ತಾತ್ಮಕವೂ ಆದ ಸಾರ್ವಭೌಮ ದೇಶಕ್ಕಾಗಿ ರಚಿತವಾಗುತ್ತದೆ. ಎನ್ನುತ್ತಾ ಭಾಷಣವನ್ನು ಮುಂದುವರಿಸಿದರು.

ಮರುದಿನ ಡಿಸೆಂಬರ್ 17 ರಂದು ಅನಿರೀಕ್ಷಿತವೆನ್ನುವಂತೆ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾದ ಡಾ|| ರಾಜೇಂದ್ರ ಪ್ರಸಾದರವರು ಡಾ|| ಅಂಬೇಂಡ್ಕರ್‌ರವರನ್ನು ಈ ಕುರಿತು ತಮ್ಮ ಅಭಿಪ್ರಾಯವನ್ನು ಹೇಳಬೇಕೆಂದು ಆಹ್ವಾನಿಸಿದರು. ಯಾವ ಸಿದ್ಧತೆಯೂ ಇಲ್ಲದೆ ಬಂದ ಡಾ|| ಬಾಬಾ ಸಾಹೇಬರು ತಮ್ಮ ಸರದಿಯು ಮರುದಿನ ಬಂದಿದ್ದರೆ ಅದು ತಮಗೆ

ಅನುಕೂಲಕರವಾಗುತ್ತಿತ್ತು ಎಂದು ಹೇಳುತ್ತಲೇ ಪೂರ್ವ ಸಿದ್ಧತೆಯಿಲ್ಲದೆ ತಮ್ಮ ದೀರ್ಘ ಭಾಷಣವನ್ನು ಮಾಡಿದರು.

ಈ ಸಂದರ್ಭವನ್ನು ಡಾ| ಅಂಬೇಡ್ಕರ್‌ರವರ ಜೀವನಚರಿತ್ರೆಕಾರರಾದ ಧನಂಜಯ ಕೀರ್ ಬರೆಯುತ್ತಾ ಅದು ಬಾಬಾಸಾಹೇಬರು ಕೈಗೊಂಡ ಅಪಾಯಕಾರಿಯಾದ ನಿರ್ಧಾರವೆನ್ನುತ್ತಾರೆ. ಕಾಂಗ್ರೆಸ್ಸಿನಲ್ಲಿ ಸಮರ್ಥ ನಾಯಕರೆನಿಸಿದ ನೆಹರೂ ವಿರುದ್ದ ಅಭಿಪ್ರಾಯವನ್ನು ಕೊಡುವುದೆಂದರೆ ತಮ್ಮ ಸಾರ್ವಜನಿಕ ಜೀವನದ ಅಂತ್ಯವನ್ನು ತಾವೇ ಆಹ್ವಾನಿಸುವುದು ಎಂದು ಎಲ್ಲರೂ ಅಂದು ಕೊಂಡಿದ್ದರು. ಕಾಂಗ್ರೆಸ್ ಸದಸ್ಯರೆಲ್ಲರೂ ಅದಕ್ಕೆ ಸಿದ್ದರಾಗಿ ಕಾಯುತ್ತಿದ್ದರು. ಆದರೆ ಅವರ ಸುದೀರ್ಘ ಭಾಷಣಕ್ಕೆ ಅಪಾರ ಪ್ರಶಂಸೆ ದೊರಕಿ ಬಾಬಾ ಸಾಹೇಬರ ರಾಜಕೀಯ ಜೀವನದ ಗತಿಯೇ ಬದಲಾಯಿತು ಎನ್ನುತ್ತಾರೆ ಧನಂಜಯ ಕೀ‌.

ಡಾ| ಅಂಬೇಡ್ಕರ್‌ರವರು ನೆಹರೂರವರ ನಿರ್ಣಯಗಳು “ಶಬ್ದಾಡಂಬರ” ಎಂದು ಹೇಳಿದರು. ಸಮಾಜವಾದಿಯೆಂದು ಕರೆದುಕೊಳ್ಳುವ ನೆಹರೂ, ರಾಜ್ಯಾಂಗ ರಚನೆಯ ನಿರ್ಣಯದ ಭಾಗವಾಗಿ ಅಲ್ಲಿರುವ ಹಲವು ಅಂಶಗಳನ್ನು ಸೇರಿಸಲೇಬಾರದಾಗಿತ್ತು. ಎಂದರು. ಡಾ| ಬಾಬಾ ಸಾಹೇಬರ ಅಭಿಪ್ರಾಯದಂತೆ ಅಲ್ಲಿರುವ ಎಲ್ಲಾ ಬಿಂದುಗಳು, ಫ್ರೆಂಚ್ ಸಂವಿಧಾನ ಸಭೆಯು 450 ವರ್ಷಗಳ ಹಿಂದೆ ಸಾರಿದ ಮಾನವ ಹಕ್ಕುಗಳ ಘೋಷಣೆಯನ್ನು ನೆನಪಿಗೆ ತರುತ್ತಿದೆ. ತಾತ್ವಿಕ ವಿಚಾರಗಳು ಮಾನಸಿಕ ನೆಲೆಯ ಭಾಗಗಳಾಗಬೇಕೇ ವಿನಹ ಅವು ಶಬ್ದಗಳಲ್ಲಿ ಪ್ರಣೀತಗೊಳ್ಳಬಾರದು. ಫ್ರೆಂಚ್ ಸಂವಿಧಾನದಲ್ಲಿ ಅಂತರ್ಗತವಾದ ತತ್ವಗಳು ಈಗಾಗಲೇ ಆಧುನಿಕ ಮಾನವನ ಮನೋನೆಲೆಯ ಅವಿಭಾಜ್ಯ ಅಂಗವಾಗಿ ಪರಿಣಮಿಸಿವೆ. ಅವನ್ನು ಈಗ ವಾಚ್ಯವಾಗಿ ಬದಲಾಯಿಸಿ ಕೊಡುವುದು ಸಮನಲ್ಲ. ಸಜ್ಜನ ಆಲೋಚನೆ ಮತ್ತು ಸಾಮಾಜಿಕ ರಚನೆಯಲ್ಲಿ ಮುಂಚೂಣಿಯ ಪ್ರಾಚೀನ ದೇಶವಾದ ನಮ್ಮಲ್ಲಿ ಅಂತಹ ಮೌಲ್ಯಗಳನ್ನು ನಮ್ಮ ಜನರು ಎಂದೂ ಕೂಡಾ ನಿರಾಕರಿಸಲಾರರು. ಅದನ್ನೇ ಈಗ ನಿರ್ಣಯದ ರೂಪದಲ್ಲಿ ಪುನರುಚ್ಚರಿಸುವುದು ಮಾತ್ರ ಶುದ್ಧ ಶಬ್ದಾಡಂಬರವಾಗುತ್ತದೆ ಅಷ್ಟೇ. ಈ ತತ್ವಗಳು ನಮ್ಮ ಪಾಲಿಗೆ ಮೌನವಾದ ನಿಷ್ಕಳಂಕ ಪ್ರತಿಜ್ಞೆಗಳು, ಅವುಗಳು ನಮ್ಮ ಮಾರ್ಗವೆಂದು ಮತ್ತೆ ಮತ್ತೆ ಸಾರಿ ಹೇಳುವುದು ಅನಾವಶ್ಯಕ ಎಂದು ಡಾ| ಅಂಬೇಡ್ಕರ್ ವಿವರಿಸಿದರು.

ಕಾನೂನು ಯಾವುದು ಮತ್ತು ನೈತಿಕತೆಯು ಯಾವುದು ಎಂಬುದನ್ನು ಅಂದಂದಿನ ಆಡಳಿತಾಂಗವು ನಿರ್ಧರಿಸುತ್ತದೆ. ಒಂದು ಆಡಳಿತವು ತನ್ನದೇ ಆದ ಅಭಿಪ್ರಾಯವನ್ನು ತಳೆದರೆ ಇನ್ನೊಂದು ಆಡಳಿತವು ಬೇರೊಂದೇ ದೃಷ್ಟಿಯನ್ನು ಹೊಂದಬಹುದು. ಇಂತಹ ಸ್ಥಿತಿಯಲ್ಲಿ ಆದರ್ಶವೆನ್ನುವ ಮಾರ್ಗವನ್ನು ಮನೋಧರ್ಮವನ್ನಾಗಿಸಬಹುದಲ್ಲದೆ, ಅದನ್ನು ಕೆಲವೊಂದು ಆಡಂಬರದ ಶಬ್ದಗಳಲ್ಲಿ ಕಟ್ಟಿಡಲು ಪ್ರಯತ್ನಿಸಬಾರದು ಎನ್ನುವುದು ಡಾ| ಅಂಬೇಡ್ಕರರ ಅಭಿಪ್ರಾಯವಾಗಿದ್ದಿತು.

ಡಾ| ಅಂಬೇಡ್ಕರರ ಆ ದಿನದ ಮಾತುಗಳನ್ನು ಕೇಳಿದ ಕಾಂಗ್ರೆಸ್ಸಿನ ವಿ.ಎನ್ ಗಾಡ್ಗಳ್, ಅವರನ್ನು ಮುಕ್ತವಾಗಿ ಪ್ರಶಂಸಿಸಿದರು. ಡಾ| ಅಂಬೇಡ್ಕರರ ಭಾಷಣವು ಒಬ್ಬ ಪ್ರೌಢ ರಾಜನೀತಿಜ್ಞನ ಮಾತಿನಂತಿತ್ತು. ಆದರಲ್ಲಿ ಸ್ವಲ್ಪವೂ ಕಹಿಯಿರಲಿಲ್ಲ. ಅಷ್ಟರ ಮಟ್ಟಿಗೆ ಅದು ಪ್ರಾಮಾಣಿಕವೆನಿಸುವ ಪರಿಣಾಮವನ್ನು ಉಂಟುಮಾಡಿತು. ಇಡೀ ಸದನವು ಅವರ ಭಾಷಣವನ್ನು ಪೂರ್ಣ ನಿಶ್ಯಬ್ದವಾಗಿ ಆಲಿಸಿತು. ಸದಸ್ಯರೆಲ್ಲರೂ ಚಪ್ಪಾಳೆಯ ಸುರಿಮಳೆಗೈದರು. ಭಾಷಣಕಾರರಿಗೆ ಅಭಿನಂದನೆಯ ಮಹಾಪೂರವೇ ಹರಿಯಿತು. ಭಾಷಣವು ಅದರ ನಿರ್ಧಾರಿತ ಫಲಿತಾಂಶವನ್ನು ಸಾಧಿಸಿತು ಎಂದು ಗಾಡೀಲ್ ಅಭಿಪ್ರಾಯಪಟ್ಟರು. ಇದಾದ ನಂತರವೇ ಡಾ| ಅಂಬೇಡ್ಕರ್ ಸಂವಿಧಾನ ಸಭೆಯ ಕರಡು ಸಮೀತಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಮುಂದೆ ನಡೆದುದು ಸಂವಿಧಾನದ ಸ್ಕೂಲ ಮತ್ತು ಸೂಕ್ಷ್ಮ ಪರಿಶೀಲನೆಗಳು. 1948 ನವಂಬರ್‌ನಲ್ಲಿ ಮೊದಲ ಪರಿಶೀಲನೆಯು ನಡೆಯಿತು. ಎರಡನೇ ಚರ್ಚೆಯು ನವೆಂಬರ್ 15 ರಿಂದ ಪ್ರಾರಂಭಗೊಂಡಿತು. ಒಂದೊಂದು ಒಳವಿಧಿಗಳನ್ನು ಕುರಿತು ವಿಸ್ತ್ರತ ಚರ್ಚೆಯಾಯಿತು. ಇದು ಸರಿಸುಮಾರು ಒಂದು ವರ್ಷಕಾಲ ನಡೆದು 1949 ಅಕ್ಟೋಬರ್ 17ರ ವರೆಗೆ ಮುಂದುವರೆಯಿತು. ಮೂರನೆಯ ವಾಚನವು ಶುರುವಾದುದು 1949 ನವಂಬರ್ 14ರಂದು. we

1948ರ ಫೆಬ್ರವರಿ 21ರಂದು ಕರಡು ಸಂವಿಧಾನವನ್ನು ಭಾರತ ಸಂವಿಧಾನ ಸಭೆಯ ಅಧ್ಯಕ್ಷರಿಗೆ ಸಲ್ಲಿಸಲಾಯಿತು. ಹಲವನ್ನು ಸೂಕ್ತ ಟಿಪ್ಪಣಿಗಳಿಂದ ತಿಳಿಸಿದರೆ ಮಹತ್ವದ ಬದಲಾವಣೆಗಳನ್ನು ಪ್ರತ್ಯೇಕವಾಗಿ ಗುರುತಿಸಿ ಹೇಳಲಾಯಿತು.

ಸಂವಿಧಾನದ ಪೀಠಿಕೆಯ ಬಗ್ಗೆ ಚರ್ಚೆಯನ್ನು ತಿಳಿಸುತ್ತಾ ಜನವರಿ 1947ರಲ್ಲಿ ಪೀಠಿಕೆಗೆ ಸಂಬಂಧಿಸಿದಂತೆ ಸಂವಿಧಾನ ಸಮಿತಿಯು ಒಂದು ಗೊತ್ತುವಳಿಯನ್ನು ಅಂಗೀಕರಿಸಿ ಭಾರತವು ಸಾರ್ವಭೌಮ ಸ್ವತಂತ್ರ್ಯ ಗಣರಾಜ್ಯವಿರಬೇಕೆಂದು ತಿಳಿಸಿದೆ. ಆದರೆ ಕರಡು ಸಮಿತಿಯು ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯ ಎಂಬ ಪದಗಳಿರಬೇಕೆಂದು ನಿರ್ಣಯಿಸಿದೆ. ಏಕೆಂದರೆ ಸಾಮಾನ್ಯವಾಗಿ ಸಾರ್ವಭೌಮ ಪದವು ಸ್ವಾತಂತ್ರ್ಯದಿಂದ ಒಡಗೂಡಿದ್ದು ಮತ್ತೆ ಸ್ವಾತಂತ್ರ್ಯ ಪದವನ್ನು ಪ್ರಯೋಗಿಸುವುದು ಸೂಕ್ತವಾಗಬಾರದು ಎಂದಿತು. ಸಂವಿಧಾನದ ಒಂದೊಂದು ಶಬ್ದವನ್ನು ಸೇರಿಸಲಾಗಲೀ ತೆಗೆಯಲಾಗಲೀ ಅದರ ಹಿಂದಿರುವ ಬೌದ್ಧಿಕ ಪರಿಶ್ರಮವು ಹೀಗಿದ್ದಿತು. ಹೀಗಾಗಿಯೇ ಮುಂದೆ ಅಂತಿಮವಾಗಿ 1948ರ ಫೆಬ್ರವರಿ 26ರಂದು ಭಾರತದ ವಿಶೇಷ ಗೆಜೆಟ್ ತನ್ನ ಪ್ರತಿಯಲ್ಲಿ ಸಂವಿಧಾನದ ಮೊದಲ ವಾಕ್ಯವನ್ನು ಹೀಗೆ ವಿವರಿಸಿತು.

'ನಾವು ಭಾರತದ ಜನರು ಶ್ರದ್ಧಾ ಪೂರ್ವಕವಾಗಿ ಭಾರತವನ್ನು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ನಿರ್ಣಯಿಸಿ ಅದರ ಪ್ರಜೆಗಳಿಗೆ.... ಎಂದು ಘೋಷಿಸಿತು.

ಇಷ್ಟೊಂದು ಸೂಕ್ಷ್ಮಹಿನ್ನೆಲೆಯಲ್ಲಿ ಸಿದ್ಧವಾಗಿರುವ ಸಂವಿಧಾನದ ಮೊದಲ ವಾಕ್ಯವನ್ನು ಮೊದಲುಗೊಂಡು ಸಂವಿಧಾನದ ಆಶಯಗಳನ್ನೇ ಬದಲಾಯಿಸಿ ತನ್ನ ಅಧಿಕಾರವನ್ನು ಶಾಶ್ವತವಾಗಿಸಲು ಇಂದಿರಾಗಾಂಧಿ ಪ್ರಯತ್ನಿಸಿದುದು ತುರ್ತು ಪರಿಸ್ಥಿತಿಯ ಕಾಲದಲ್ಲಿ, ತನ್ನ ಪಕ್ಷದ ಭಿನ್ನಮತೀಯರನ್ನೂ ಸೇರಿಸಿ ಹಲವು ನೂರು ವಿರೋಧ ಪಕ್ಷದ ನಾಯಕರನ್ನು ಬಂಧಿಸಿದ್ದು ಆ ಕರಾಳ ದಿನಗಳಲ್ಲಿ, ಸಹಸ್ರಾರು ದೇಶಭಕ್ತರನ್ನು ವಿಚಾರಣೆಯಿಲ್ಲದೆ ಸೆರೆಮನೆಯಲ್ಲಿಟ್ಟು ಸರ್ವಾಧಿಕಾರದ ಆಡಳಿತದಲ್ಲಿ, ಅಂತಹ ದಿನಗಳಲ್ಲಿ ಸಂವಿಧಾನಕ್ಕೆ ಮಾಡಿದ 42ನೇ ತಿದ್ದುಪಡಿಯಲ್ಲಿ ಸಂವಿಧಾನದ ಮೊದಲ ವಾಕ್ಯವನ್ನು “ನಾವು ಭಾರತದ ಜನರು ಶ್ರದ್ಧಾಪೂರ್ವವಾಗಿ ಭಾರತವನ್ನು ಸಾರ್ವಭೌಮ ಸಮಾಜವಾದೀ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ನಿರ್ಣಯಿಸಿ” ಎನ್ನುವಂತೆ ಇಂದಿರಾಗಾಂಧಿಯವರು ಬದಲಾಯಿಸಿದರು.

ಮೂಲ ಸಂವಿಧಾನದ ರಚನೆಯ ಕಾಲದಲ್ಲಿ ಡಾ| ಬಾಬಾ ಸಾಹೇಬರು ಭಾರತದ ಸಾಮಾಜಿಕ ಮತ್ತು ಆರ್ಥಿಕ ರಚನೆಯನ್ನು ರಚನೆಯನ್ನು ಸಂವಿಧಾನದಲ್ಲಿ ವರ್ಣಿಸುವುದಕ್ಕೆ ವಿರೋಧಿಸಿದುದನ್ನು ನಾವು ನೆಹರೂರವರ ನಿರ್ಣಯದ ಕುರಿತು ಅವರು ತಳೆದ ಬಿನ್ನಾಭಿಪ್ರಾಯವನ್ನು ಲೇಖನದ ಮೊದಲು ಓದಿದೆವು. ಡಾ| ಅಂಬೇಡ್ಕರ್ ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿದವರು. ಪ್ರಾಚೀನ ರಾಜ್ಯ ಪದ್ಧತಿಗಳ ಮೂಲಾಶಯಗಳನ್ನು ಮನಗಂಡಿದ್ದರು. ಅವೆಲ್ಲವೂ ರಾಜಕಾರಣದಲ್ಲಿ ಪಾಲುಗೊಳ್ಳುವ ಪ್ರತಿಯೊಬ್ಬ ನಾಗರಿಕನ ಪ್ರೇರಕ ಪ್ರೋತವಾಗಲಿ ಎಂದು ಬಯಸಿದ್ದರು. ಓದಲು ಸುಂದರವೆನಿಸುವ ಕಾವ್ಯಮಯವೆನಿಸುವ ಶಬ್ದಾಡಂಬರಗಳು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ನೆಹರೂರವರಿಗೂ ಅವರ ಹಲವು ಹಿಂಬಾಲಕರಿಗೂ ಮೆಚ್ಚಲಷ್ಟೇ ಇರುವ ಜಾತ್ಯತೀತ, ಸಮಾಜವಾದ, ಮೊದಲಾದ ಪಾಶ್ಚಾತ್ಯ ದೇಶಗಳ ಪ್ರಿಯ ಘೋಷಣೆಗಳನ್ನು ಅವರು ಭಾರತ ಸಂವಿಧಾನದಿಂದ ದೂರವಿಡಲು ಬಯಸಿದರು. ನೆಹರೂರವರನನ್ನು ಅಂತಹ ಪ್ರಯತ್ನದಿಂದ ದೂರವಿರಿಸಿದರು.

ಈ ಎರಡು ಶಬ್ದಗಳನ್ನು ಸೇರಿಸುವ ಪ್ರಸ್ತಾವನೆಯು ಆ ಸಮಯದಲ್ಲೇ ಕೆಲವು ಸದಸ್ಯರ ಮೂಲಕ ಬಂದಿದ್ದಿತು. ಸರ್ಕಾರದ ವಿವಿಧ ಅಂಗಗಳ ಕಾರ್ಯ ವಿಧಾನಗಳನ್ನು ವಿಧಿವತ್ತಾಗಿಸುವುದು ಮಾತ್ರ ಸಂವಿಧಾನದ ಉದ್ದೇಶ. ಅದು ಸರ್ಕಾರ ನಡೆಸುವ ಪಕ್ಷದ ಅಥವಾ ವ್ಯಕ್ತಿಗಳ ಕಾರ್ಯವಿಧಾನವನ್ನು ಸೂಚಿಸುವ ಸೂಚಿಯಲ್ಲ ಅದನ್ನು ಕಾಲಕಾಲಕ್ಕೆ ನಿರ್ಧರಿಸುವವರು ಪ್ರಜೆಗಳು. ಅದನ್ನೂ ಸಂವಿಧಾನವು ನಿರ್ದೇಸಿಸಲು ಹೋದರೆ ಅದು ಪ್ರಜಾಪ್ರಭುತ್ವವೆನಿಸದು. ಹಾಗಾಗಿ ಸಂವಿಧಾನ ರಚನೆಯ ಕಾಲದಲ್ಲಿ ಬಂದ ಸಮಾಜವಾದ ಮತ್ತು ಜಾತ್ಯತೀತತೆಯ ತಿದ್ದುಪಡಿಗಳನ್ನು ಡಾ| ಅಂಬೇಡ್ಕರ್ ತಮ್ಮ ಸಮರ್ಥ ವಾದದಿಂದ ವಿರೋಧಿಸಿದರು. ಇಂತಹ ಉದಾರ ರಾಜಕಾರಣದ ಮನೋ ಭೂಮಿಕೆಯನ್ನು ನಾಶಗೊಳಿಸಿದ 'ಎಮರ್ಜನ್ಸಿಯ ಸರ್ವಾಧಿಕಾರದ ಪಳೆಯುಳಿಕೆಯನ್ನು ಈಗಲಾದರೂ ಕಿತ್ತೊಗೆಯುವುದು ಪ್ರೌಢತೆಯ ಲಕ್ಷಣವಾಗುವುದು.

ವಿಮರ್ಶೆ

ಪ್ಲಾಸ್ಟಿಕ್ ಮುಕ್ತ ಚಾಮುಂಡಿ, ಮೈಸೂರು ನಗರ