Hindu Vani
Index
ಇತಿಹಾಸ
ಹಿಂದೂ ಧರ್ಮ ಮತ್ತು ಭಾರತಕ್ಕೆ ಹಾನಿಯಾಗಬಾರದು
- ಡಾ| ಅಂಬೇಡ್ಕರ್
1930ರ ದಶಕದ ಕೊನೆಯ ಭಾಗದಲ್ಲಿ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ತಾವು ಸಿಖ್ ಮತಕ್ಕೆ ಮತಾಂತರಗೊಳ್ಳುವುದು ಸರಿಯೆನಿಸಿತು. ಅದಕ್ಕೆ ಅವರು ಕಂಡುಕೊಂಡ ಕಾರಣಗಳು ಹಲವು. ಮೊದಲನೆಯದಾಗಿ ಅವರು 1935ರ ನವೆಂಬ 30ರ ಟೈಂಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ನೀಡಿದ ಹೇಳಿಕೆಯಂತೆ ತಾವು ಯಾವ ಧರ್ಮಕ್ಕೆ ಮತಾಂತರಗೊಂಡರೆ ಹಿಂದು ಧರ್ಮಕ್ಕೆ ಮತ್ತು ಭಾರತ ದೇಶಕ್ಕೆ ಅತ್ಯಂತ ಕಡಿಮೆ ಹಾನಿಯಾಗುವುದೋ ಆ ಧರ್ಮಕ್ಕೆ ಮತಾಂತರಗೊಳ್ಳುವುದು ಸಮಂಜಸ ಎಂದು ನಿರ್ಧರಿಸಿದರು.
ಒಂದು ಹೊಸಧರ್ಮವನ್ನು ಹುಟ್ಟುಹಾಕಿ ಅದಕ್ಕೆ ಸೇರ್ಪಡೆಯಾಗುವ ಸಾಧ್ಯತೆಯು ತೀರಾ ಕಡಿಮೆ. ಆದರೆ ಯಾವುದರಿಂದ ತಮ್ಮ ಸಮುದಾಯಕ್ಕೆ ಉಪಯೋಗವಾಗುವುದೋ ಆ ಧರ್ಮಕ್ಕೆ ಸೇರಬೇಕು. ಎನ್ನುವುದು ಅವರ ತರ್ಕವಾಗಿದ್ದಿತು.
ಮೊದಲನೆಯದಾಗಿ ಅವರ ಕಣ್ಣಮುಂದೆ ಇದ್ದುದು ಇಸ್ಲಾಂ. ತಮ್ಮ ವರ್ಗಕ್ಕೆ ಅಗತ್ಯವಿರುವುದನ್ನು ಇಸ್ಲಾಂ ಕೊಡಬಲ್ಲದು. ಆರ್ಥಿಕವಾಗಿ ಇಸ್ಲಾಂ ಸುಭದ್ರವಾಗಿದೆ. ಆದುದರಿಂದ ಈ ದಿಕ್ಕಿನಲ್ಲಿ ಯೋಚಿಸಿದರೆ ಅಸ್ಪೃಶ್ಯ ವರ್ಗವು ಆರ್ಥಿಕ ಬೆಂಬಲದ ಕುರಿತು ನಿಶ್ಚಿಂತವಾಗಿರಬಹುದು. ಮುಸ್ಲಿಮರು ದೇಶಾದ್ಯಂತ ಹರಡಿಕೊಂಡಿರುವುದರಿಂದ ತಮ್ಮ ಸಮೂಹವು ಸುರಕ್ಷತೆ ದೃಷ್ಟಿಯಲ್ಲಿ ಕೂಡಾ ನಿರಾತಂಕರಾಗಿರಬಹುದು. ರಾಜಕೀಯವಾಗಿ ಇಸ್ಲಾಂ ಭದ್ರತಾ ಕವಚವಾಗಬಲ್ಲದು.
ಎರಡನೆಯದಾಗಿ ಕ್ರೈಸ್ತಮತ. ಬಹುದೊಡ್ಡ ಸಂಖ್ಯೆಯಲ್ಲಿ ಕ್ರೈಸ್ತಮತಕ್ಕೆ ಮತಾಂತರವಾಗುವುದು ಎಂದಾಗ, ಅಮೆರಿಕಾ, ಇಂಗ್ಲೆಂಡ್ ಮುಂತಾದ ಶ್ರೀಮಂತ ಕ್ರೈಸ್ತ ದೇಶಗಳು ಮುಂದೆ ಅವಶ್ಯವಾಗ ಬಹುದಾದ ಆರ್ಥಿಕ ನೆರವನ್ನು ನೀಡಬಲ್ಲವು. ಆದರೆ ಸಾಮಾಜಿಕವಾಗಿ ಕ್ರೈಸ್ತ ಮತವು ಮತಾಂತರಿತರಿಗೆ ಬೆಂಬಲವಾಗಿ ನಿಲ್ಲುವುದು ಅನುಮಾನಕರ. ಏಕೆಂದರೆ ಭಾರತದಲ್ಲಿ ಬೇಕಷ್ಟು ಸಂಖ್ಯೆಯ ಬಲವು ಕ್ರೈಸ್ತರಿಗಿಲ್ಲ. ಆದರೆ ಅದಕ್ಕೆ ಬದಲು ಆಂಗ್ಲ ಸರ್ಕಾರದ ಬೆಂಬಲವು ದೊರಕಬಲ್ಲದು. ಹೀಗೆ ಇಸ್ಲಾಮಿನಿಂದ ಏನೇನು ದೊರಕಬಲ್ಲವೋ. ಅವೆಲ್ಲವೂ ಕ್ರೈಸ್ತ ಮತದಿಂದಲೂ ಸಿಗಬಲ್ಲವು. ಏಕೆಂದರೆ ಮುಸಲ್ಮಾನರಿಗೆ ಇರುವ ಎಲ್ಲಾ ರಾಜಕೀಯ ವಿಶೇಷ ಸವಲತ್ತುಗಳು ಆಗ ಕ್ರೈಸ್ತರಿಗೂ ಇದ್ದಿತು.
ಮತ್ತೆ ಮೂರನೆಯದಾಗಿ ಇರುವುದು ಸಿಖ್ ಮತ. ಹಿಂದಿನ ಎರಡು ಮತಗಳನ್ನು ಹೋಲಿಸಿದಾಗ ಇದು ಅಷ್ಟೊಂದು ಆಕರ್ಷಕವಾಗಿಲ್ಲ. ಏಕೆಂದರೆ ಸಿಖ್ ಮತೀಯರ ಸಂಖ್ಯೆ ಇದ್ದುದು 40ಲಕ್ಷಮಾತ್ರವೆ. ಆದುದರಿಂದ ಹೊಸದಾಗಿ ಬಂದವರಿಗೆ ಹಂಚುವಷ್ಟು ಆರ್ಥಿಕ ಶಕ್ತಿಯು ಸಿಬ್ಬರಿಗಿಲ್ಲ. ಇನ್ನು ಸಿಬ್ಬರು ಕೇಂದ್ರಿಕೃತರಾಗಿರುವುದು ಪಂಜಾಬಿನಲ್ಲಿ ಮಾತ್ರ. ಸಾಮಾಜಿಕ ಬೆಂಬಲಕ್ಕೂ ಅಂತಹ ಅಸ್ಪದವಿರುವಂತಿಲ್ಲ. ರಾಜಕೀಯವಾಗಿಯೂ ಪಂಜಾಬಿನಿಂದ ಹೊರಗೆ ಬಂದರೆ ರಾಜಕೀಯವಾಗಿ ಲಾಭದಾಯಕವಾಗಿಲ್ಲದ ಮತ್ತು ವಿಶೇಷ ಪ್ರಾತಿನಿಧ್ಯವೂ ಸಿಗಲಾರದ ಪರಿಸ್ಥಿತಿಯಿದೆ.
ಇಲ್ಲಿ ಸಿಖ್ ಮತದಿಂದ ಒಂದು ವಿಚಾರದಲ್ಲಿ ಮಾತ್ರ ಸುಸಂಬದ್ಧವಾದ ಸಕಾರಾತ್ಮಕ ಸ್ಪಂದನವಿರಲಿದೆ. ನಮ್ಮ ವರ್ಗವು ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಸೇರ್ಪಡೆಯಾದರೆ ಅವರು ಹಿಂದೂ ಧರ್ಮದಿಂದ ಹೊರಹೋಗುವುದು ಮಾತ್ರವಲ್ಲ ಹಿಂದೂ ಸಂಸ್ಕೃತಿಯಿಂದಲೇ ದೂರವಾಗುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಸಿಖ್‌ಧರ್ಮಕ್ಕೆ ಸೇರ್ಪಡೆಯಾದರೆ ಅವರೊಂದಿಗೆ ಹಿಂದೂ ಸಂಸ್ಕೃತಿಯು ಉಳಿದುಕೊಳ್ಳುತ್ತದೆ. ಹಿಂದುಗಳಿಗೂ ನಮ್ಮ ಈ ಉಪಕ್ರಮವು ಸರಿಯಾದುದು ಎಂದೇ ಅನಿಸಲಿದೆ.
ಇನ್ನು ತಮ್ಮ ಸಮೂಹದ ಮತಾಂತರದಿಂದ ಭಾರತದ ಭವಿಷ್ಯದ ಮೇಲೆ ಉಂಟಾಗುವ ಪರಿಣಾಮವೇನು ಎಂದು ಕೂಡಾ ಡಾ| ಬಾಬಾ ಸಾಹೇಬರು ಚಿಂತಿಸಿದ್ದರು. ಕ್ರೈಸ್ತ ಅಥವಾ ಇಸ್ಲಾಮಿಗೆ ಮತಾಂತರಗೊಂಡರೆ ಬಹುದೊಡ್ಡ ವರ್ಗವೊಂದು ರಾಷ್ಟ್ರ ವಿರೋಧಿಯಾಗುತ್ತದೆ. ಇಸ್ಲಾಮಿಗೆ ಸೇರಿದರಂತೂ ಸಂಖ್ಯೆಯಲ್ಲಿ ಅವರು ಇಮ್ಮಡಿಯಾಗುತ್ತಾರೆ.
ಕ್ರೈಸ್ತ ಮತಾಂತರಗೊಂಡರೆ ಅವರ ಸಂಖ್ಯೆಯು ದೇಶದಲ್ಲಿ 6 ಕೋಟಿಗೆ ಹತ್ತಿರವಾಗುತ್ತದೆ. ಇದರಿಂದ ದೇಶದ ಮೇಲೆ ಕ್ರೈಸ್ತರ ಹಿಡಿತ ಬಲಗೊಳ್ಳುತ್ತದೆ. ಆದರೆ ಸಿಖ್ ಧರ್ಮಕ್ಕೆ ಸೇರುವುದರಿಂದ ಭಾರತದ ಭವಿಷ್ಯದ ಮೇಲೆ ಯಾವುದೇ ದುಷ್ಪರಿಣಾಮವಾಗದು. ಅದು ಅರಾಷ್ಟ್ರೀಯ ಕೃತ್ಯವಾಗದು. ಅದರ ಬದಲು ದೇಶಕ್ಕೆ ಒಳಿತೇ ಆಗುವುದು. ದೇಶದ ಹಿತದೃಷ್ಟಿಯಿಂದ ನೋಡಿದರೆ ಶೋಷಿತರೆನಿಸಿಕೊಂಡವರು ಸಿರಾಗವುದೇ ಸೂಕ್ತ.
ರಾಜಕೀಯವಾಗಿ ಮುನ್ನೆಲೆಗೆ ಬರಲು ಸಿಖ್ ಆಗಿ ಮತಾಂತರಗೊಂಡಾಗ ಮತಾಂತರಗೊಂಡವರು ತಮ್ಮ ಹೆಸರ ಮುಂದೆ ಸಿಂಗ್ ಎಂದು ಕರೆಸಿಕೊಳ್ಳಬೇಕು. ಹಿಂದುಗಳು ಈ ಕ್ರಮಕ್ಕೆ ಮಾನಸಿಕವಾಗಿ ತಮ್ಮ ಪೂರ್ಣ ಸಮ್ಮಿತಿಯನ್ನು ನೀಡಿದರೆ ಸಾಕು.
ಡಾ| ಬಾಬಾ ಸಾಹೇಬರು ತಮ್ಮೆಲ್ಲ ನಿರ್ಧಾರಗಳನ್ನು ತಮ್ಮ ಬೆಂಬಲಿಗರೊಂದಿಗೆ ಹಂಚಿಕೊಂಡು ಅವರ ಸಲಹೆಗಳನ್ನು ಕೇಳುತ್ತಿದ್ದರು. ಅವರ ಸ್ನೇಹಿತರು ಸಿಖ್ ಮತದ ವಿಚಾರವು ಚರ್ಚೆಗೆ ಬಂದಾಗ ಈ ವಿಚಾರದಲ್ಲಿ ತಮ್ಮ ಮತಾಂತರ ನಿರ್ಧಾರಕ್ಕೆ ಹಿಂದೂ ಮಹಾಸಭೆಯ ಬೆಂಬಲವನ್ನು ಕೇಳುವುದು ಒಳ್ಳೆಯದು ಎನ್ನುವ ಅಭಿಪ್ರಾಯವನ್ನು ನೀಡಿದರು. ಏಕೆಂದರೆ ಒಂದು ತ್ರಯಸ್ಥ ಸಂಘಟನೆಯು ಬೆಂಬಲವಾಗಿ ಇರುವುದು ಉತ್ತಮ. ಅಷ್ಟೇ ಅಲ್ಲ ಹಿಂದು ಮಹಾಸಭೆಗೆ ಸಿಖ್ ಮತವು ಅನ್ಯವೆಂಬ ಭಾವನೆಯ ಇರದು. ಸಿಖ್ ಮತವು ಹಿಂದೂ ಧರ್ಮದಿಂದಲೇ ಒಡಹುಟ್ಟಿರುವುದು ಎನ್ನುವ ಅಭಿಪ್ರಾಯವಿದೆ ಇಬ್ಬರ ನಡುವೆ ವಿವಾಹ ಸಂಬಂಧವೂ ಒಪ್ಪಿದ ಪದ್ಧತಿಯಾಗಿದೆ. ಹಿಂದೂ ಮಹಾಸಭೆಯಲ್ಲಿ ಸಿರೂ ಸದಸ್ಯರಾಗಿರುವರು.
ಈ ಸಮಾಲೋಚನೆಗಾಗಿ ಡಾ| ಅಂಬೇಡ್ಕರ್; ಹಿಂದೂ ಮಹಾಸಭೆಯ ನಾಯಕರಾಗಿದ್ದ ಡಾ| ಮುಂಜೆಯವರನ್ನು ಅಹ್ವಾನಿಸಿದರು. ಈ ಸಭೆಯು 1936 ಜೂನ್ 18 ರಂದು ಡಾ|| ಬಾಬಾ ಸಾಹೇಬರ ಸ್ವಗೃಹ 'ರಾಜಗೃಹ'ದಲ್ಲಿ ನಡೆದು ಇಬ್ಬರೂ ಸಮ್ಮತವಾದ ಅಭಿಪ್ರಾಯಕ್ಕೆ ಬಂದರು. ಆದರೆ ಮುಂದಿನ ಎರಡು ದಶಕಗಳಲ್ಲಿ ಇನ್ನೆಷ್ಟೋ ಬೆಳವಣಿಗೆಗಳು ನಡೆದವು.
1935ರಲ್ಲೇನೋ ಡಾ| ಅಂಬೇಡ್ಕರ್ 'ನಾನು ಹಿಂದುವಾಗಿ ಹುಟ್ಟಿದೆ ಆದರೆ ಹಿಂದುವಾಗಿ ಸಾಯಲಾರೆನು' ಎಂದವರು 2 ದಶಕಗಳ ನಂತರ 1956ರಲ್ಲಿ ಬೌದ್ಧರಾಗಿ ಮತಾಂತರಗೊಂಡಾಗ 'ಯಾವ ಧರ್ಮಕ್ಕೆ ಮತಾಂತರಗೊಂಡರೆ ಹಿಂದು ಧರ್ಮಕ್ಕೆ ಮತ್ತು ಭಾರತ ದೇಶಕ್ಕೆ ಅತ್ಯಂತ ಕಡಿಮೆ ಹಾನಿಯಾಗುವುದೋ ಆ ಧರ್ಮಕ್ಕೆ ಮತಾಂತರಗೊಳ್ಳುವುದು ಸಮಂಜಸವೆನ್ನುವ ನಿರ್ಧಾರಕ್ಕೆ ಬಂದಿದ್ದರು. ಭಾರತದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳೂ, ಸಾಮಾಜಿಕ ಪಲ್ಲಟಗಳೂ ಅದಕ್ಕೆ ಕಾರಣವಾದವು.
(ಆಕರ . ಬಾಬಾ ಸಾಹೇಬ್ ಅಂಬೇಡ್ಕರ್ ಭಾಷಣಗಳು ಮತ್ತು ಬರಹಗಳು)
ಪ್ರಾಚೀನ ಹೆದ್ದಾರಿಗಳು
ರಾಮಾಯಣದಲ್ಲಿ ಇಂದಿನ ಚೌದ್‌ನಿಂದ ಅಂದರೆ ರಾಜಾ ದಶರಥನ ರಾಜಧಾನಿಯಾಗಿದ್ದ ಅಯೋಧ್ಯೆಯಿಂದ ಹಿಮಾಲಯ ಪರ್ವತಗಳ ಸಮೀಪ ಬಿಯಾಸ್ ನದಿಯ ಬಳಿಯಿದ್ದ ರಾಜಗೃಹಕ್ಕೆ ಹೋಗುವ ಗ್ರೀಕರಿಗೆ ಹೈವಾಸಸ್ ಎಂದು ಪರಿಚಿತವಾಗಿ ಕೇಕಯರ ರಾಜಧಾನಿಯಾಗಿದ್ದ ಪುರಾತನ ವಿಪಾಶಾದಿಂದ ಕುರುರಾಜರ ರಾಜಧಾನಿ ಹಸ್ತಿನಾಪುರ (ದೆಹಲಿ) ಹೋಗುವ ಮಾರ್ಗವನ್ನು ಉಲ್ಲೇಖಿಸುತ್ತದೆ. ಆಧುನಿಕ ಆಟ್ಟಾಕ್ ಸಮೀಪವಿರುವ ಸ್ಥಳದಿಂದ ಒಂದು ಉತ್ತಮ ಮಾರ್ಗವು ಹಿಂದಿನ ಪುಷ್ಕಲಾವತಿಯಿಂದ ಹೊರಟು ತಕ್ಷಶಿಲಾವನ್ನು ದಾಟಿ, ಪಾಟಲಿಪುತ್ರ(ಪಾಟ್ನಾ)ವರೆಗೆ ಆಸ್ತಿತ್ವದಲ್ಲಿತ್ತೆಂದು ಗುರುತಿಸಬಹುದು. ಇನ್ನೊಂದು ರಸ್ತೆಯು ಪುಷ್ಕಲಾವತಿ ಮತ್ತು ಇಂದ್ರಪ್ರಸ್ಥ (ದೆಹಲಿ) ಗಳನ್ನು ಬೆಸೆಯುತ್ತಿತ್ತು. ಇದು ಉಜ್ಜಯಿನಿಯನ್ನು ಸಂಪರ್ಕಿಸಿದ ನಂತರ ವಿಂದ್ಯಾಪರ್ವತಾವಳಿಯಿಂದ ಕೆಳಗಿಳಿದು ಪ್ರತಿಸ್ಥಾನದ ಮೂಲಕ ನರ್ಮದಾ ತಪತಿಗಳನ್ನು ದಾಟಿ ಕೊನೆಗೆ ದುಋಣದವರೆಗೆ ಚಾಚಿತ್ತು.
-- ಡಾ| ಬಾಬಾಸಾಹೇಬ್ ಅಂಬೇಡ್ಕರ್
.