Hindu Vani
Index
ಕತೆಕತೆ ಕಾರಣ
ದೇಶಕ್ಕಾಗಿ ಅನುಭವಿಸುವ ನೋವಿನ ಸುಖ
ಚಾಫೇಕರರು ಪುಣೆಯ ಮೂವರು ಸೋದರರು. ದಾಮೋದರ ಚಾಕರ, ವಾಸುದೇವ ಚಾಫೇಕ ಮತ್ತು ಬಾಲಕೃಷ್ಣ ಚಾಫೇಕ, ವೃತ್ತಿಯಲ್ಲಿ ಅವರು ಹರಿದಾಸರು. ಅವರ ಕಥಾ ಪ್ರವಚನವನ್ನು ಕೇಳಲು ಜನರು ಕಿಕ್ಕಿರಿದು ಸೇರುತ್ತಿದ್ದರು. ಅವರ ಹರಿಕಥೆಯಲ್ಲಿ ಭಾರತಮಾತೆಯ ಸಂಕೋಲೆಯ ವರ್ಣನೆ ಇರುತ್ತಿದ್ದಿತು. ದೇಶದ ಗುಲಾಮಗಿರಿಯನ್ನು ಬಣ್ಣಿಸುವ ಗಾಯನವಿರುತ್ತಿತ್ತು. ದಾಮೋದರನು ಕಥೆಯನ್ನು ಹೇಳುತ್ತಿದ್ದರೆ ಬಾಲಕೃಷ್ಣನು ಹಾರ್ಮೋನಿಯಂ ನುಡಿಸುತ್ತಿದ್ದನು. ವಾಸುದೇವನದ್ದು ಮೃದಂಗ, ದೇಶದ ವೀರರ ಶೂರ ಪ್ರಸಂಗಗಳನ್ನು ವಿವರಿಸುವಾಗ ಬಾಲಕೃಷ್ಣನ ಹಾರ್ಮೋನಿಯಂನ ಝೇಂಕಾರ ವಾಸುದೇವನ ಮೃದಂಗದ ಪೆಟ್ಟು ಕೇಳುವವರ ಮನಸ್ಸಿನಲ್ಲಿ ಅಷ್ಟೊತ್ತಿಬಿಡುತ್ತಿದ್ದವು.
ಆ ವರ್ಷ ಪುಣೆ ನಗರದಲ್ಲಿ ಪ್ಲೇಗ್‌ರೋಗವು ಪ್ರವೇಶ ಮಾಡಿತು. ಪ್ರತಿ ಮನೆಯಲ್ಲೂ ಸಾವು ಮತ್ತು ನೋವು. ಅದರ ನಡುವೆ ಭಾರತವನ್ನು ಆಳುತ್ತಿದ್ದ ಇಂಗ್ಲೆಂಡಿನ ರಾಣಿಯ ಹುಟ್ಟುಹಬ್ಬದ ಸಂಭ್ರಮದ ಕಾರ್ಯಕ್ರಮಗಳನ್ನು ಆಂಗ್ಲ ಸರ್ಕಾರವು ನಡೆಸುತ್ತಿದ್ದಿತು. ಪ್ಲೇಗ್‌ಗದ ವಿಚಾರಣಾ ಅಧಿಕಾರಿಯಾಗಿ ಬಿಳಿಯ ಅಧಿಕಾರಿ ಬ್ಯಾಂಡ್ ನೇಮಕಗೊಂಡಿದ್ದನು. ರೋಗದ ಸುಳಿವನ್ನು ಹುಡುಕುವ ನೆಪದಲ್ಲಿ ಲ್ಯಾಂಡ್ ಪ್ರತಿ ಮನೆಗೂ ಬೂಟುಕಾಲಿನಲ್ಲಿ ಪ್ರವೇಶಿಸುತ್ತಿದ್ದನು. ಸತ್ತ ಇಲಿಗಳನ್ನು ಹುಡುಕುತ್ತ ದೇವರ ಕೋಣೆಗೂ ನುಗ್ಗುತ್ತಿದ್ದನು.
ಯಾರೂ ಪ್ರತಿಭಟಿಸುವ ಸ್ಥಿತಿಯಲ್ಲಿ ಇರಲಿಲ್ಲ. ಚಾಫೇಕರ ಸಹೋದರರು ಲೋಕಮಾನ್ಯ ತಿಲಕರನ್ನು ಭೇಟಿಯಾದರು. 'ರಾವಣನನ್ನು ಎದುರಿಸಲಾಗದ ದೇವತೆಗಳಂತೆ ಜನರು ಮೌನವಾಗಿ ಅನುಭವಿಸುತ್ತಿರುವರು ಎಂದು ಹೇಳಿದ ಸೋದರರನ್ನೇ 'ನೀವೇಕೆ ಮೌನವಾಗಿರುವಿರಿ' ಎಂದು ತಿಲಕರು ಪ್ರಶ್ನಿಸಿದರು. ಅಷ್ಟು ಕೇಳಿದ ಚಾಫೇಕರರು ಅಲ್ಲಿಂದ ಹೊರಟರು. ದೇಶದ ಜನರನ್ನು ಎಚ್ಚರಿಸಬೇಕಾದರೆ ದುಷ್ಟ ಸರ್ಕಾರದ ಅಧಿಕಾರಿಗಳಿಗೆ ಪಾಠ ಕಲಿಸಬೇಕು ಎಂದುಕೊಂಡರು. ಮೊದಲು ಬ್ಯಾಂಡನನ್ನೇ ಬಲಿ ತೆಗೆದುಕೊಳ್ಳುವ ನಿಶ್ಚಯಮಾಡಿದರು.
ರಾಣಿಯ ಹುಟ್ಟುಹಬ್ಬದ ಆಚರಣೆಯ ಔತಣ ಕೂಟದಲ್ಲಿ ಭಾಗವಹಿಸಲಿರುವ ಲ್ಯಾಂಡನ ಚಲನವಲನದ ಎಲ್ಲ ಸುಳಿವುಗಳನ್ನು ಚಾಫೇಕರ ಸಹೋದರರು ಸಂಗ್ರಹಿಸಿದರು. ಮರುದಿನ ನಡೆಯುವ ಮೇಜವಾನಿಯ ನಂತರ ಹೊರಬರುವ ಬ್ಯಾಂಡನನ್ನು ಕೊಲ್ಲಬೇಕೆಂದು ಸಿದ್ಧರಾದರು. ಬಿಳಿಯ ಅಧಿಕಾರಿಗಳೆಲ್ಲರ ಊಟ ಮಾಡುವ ಸಂಭ್ರಮವು ಮುಗಿಯಿತು. ಒಬ್ಬೊಬ್ಬರಾಗಿ ಹೊರಬಂದವರು ಅವರವರ ಸಾರೋಟನ್ನು ಹತ್ತಿಕೊಂಡು ಹೊರಟರು. ಸಾರೋಟಿನ ಹಿಂಭಾಗದಿಂದ; ಹತ್ತಿದ ವಾಸುದೇವನು ಬ್ಯಾಂಡನ ಮೇಲೆ ಗುಂಡು ಹಾರಿಸಿದನು. ಸಾರೋಟಿನಲ್ಲಿದ್ದವನು ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಮರಣ ಹೊಂದಿದನು.
ಚಾಪೇಕರ ಸಹೋದರರ ಸುಳಿವು ಹಿಡಿದ ಸರ್ಕಾರ ಅವರನ್ನು ಬೆನ್ನಟ್ಟಿತು. ಮೂವರೂ ಬಂಧಿತರಾದರು. 7 ದಿನಗಳ ಅಂತರದಲ್ಲಿ ಮೂವರನ್ನು ನೇಣಿಗೆ ಏರಿಸಲಾಯಿತು.
ದಾಮೋದರನನ್ನು ನೇಣಿಗೇರಿಸುವ ದಿನದಂದು ಅವನು ಅದೇ ಸೆರೆಮನೆಯಲ್ಲಿದ್ದ ಲೋಕಮಾನ್ಯ ತಿಲಕರನ್ನು ಭೇಟಿಯಾದನು. ಅವರು ಬರೆದ ಗೀತಾ ರಹಸ್ಯದ ಪ್ರತಿಯನ್ನು ಅವರಿಂದ ಕೇಳಿ ಪಡೆದನು. ಅದನ್ನು ಕೈಯಲ್ಲಿ ಹಿಡಿದು ಸಾಯುವುದು ತನ್ನ ಕೊನೆಯ ಇಚ್ಛೆಯೆಂದು ಹೇಳಿದನು.
ಕಿರಿಯವನಾದ ವಾಸುದೇವನು ತನ್ನ ತಂದೆಗೆ ಪತ್ರವನ್ನು ಬರೆದಿಟ್ಟನು. “ಅಪ್ಪಾ ನನ್ನ ಸಾವಿಗೆ ಅಳಬೇಡ. ನನ್ನ ಶವವು ಮನೆಗೆ ಬಂದಾಗ ನೀನು ನನ್ನ ಮದುವೆಯ ದಿಬ್ಬಣವು ಮನೆ ಮುಟ್ಟಿದಾಗ ಸಂತೋಷದಿಂದ ಸ್ವಾಗತಿಸಿದಂತೆ ಈಗಲೂ ಸ್ವಾಗತಿಸು. ಇದು ಸ್ವಾತಂತ್ರ್ಯದ ದಿಬ್ಬಣ ಅಪ್ಪಾ” ಎಂದು ಬರೆದನು. ಹೀಗಿತ್ತು ಸ್ವಾತಂತ್ರ್ಯ ಹೋರಾಟಗಾರರ ಮನಸ್ಸಿನ ಕಿಚ್ಚು.