Hindu Vani
Index
ಸಂಪಾದಕೀಯ
ಹಿಂದು ವಿಘಟನೆಗೆ ಇನ್ನೊಂದು ಸನ್ನಾಹ
ರೋಹಿತ್ ವೇಮುಲಾ ಮಸೂದೆ-2025 ಎನ್ನುವ ಕಾನೂನಿನ ಪ್ರಸ್ತಾವನೆಯೊಂದನ್ನು ಕರ್ನಾಟಕ ಶಾಸನ ಸಭೆಗಳಲ್ಲಿ, ಬರುವ ಮುಂಗಾರು ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತದೆ. ರಾಜಕೀಯದ ಎಳಸು ವ್ಯಕ್ತಿಯೆಂದೇ ಗುರುತಿಸಲಾಗುವ ರಾಹುಲ ಎನ್ನುವವರು ಅದಕ್ಕಾಗಿ ಸಿದ್ದರಾಮಯ್ಯನವರನ್ನು ಒತ್ತಾಯಿಸುತ್ತಿರುವರಂತೆ.
ಇದರ ಕುರಿತು ಚರ್ಚಿಸುವ ಮೊದಲು ಇದರ ಹಿನ್ನೆಲೆಯನ್ನು ಗಮನಿಸೋಣ. ಇಂತಹುದೇ ಆತಂಕಕಾರಿ ಕಾನೂನೊಂದನ್ನು ಆಗಿನ ಕಾಂಗ್ರೆಸ್ ನೇತೃತ್ವದ ಯು.ಪಿ.ಐ ಕೇಂದ್ರ ಸರ್ಕಾರವು 2013ರಲ್ಲಿ ತರಲು ಪ್ರಯತ್ನಿಸಿದ್ದಿತು. ಅದು ಪ್ರಿವನ್ಸನ್ ಆಫ್ ಕಮ್ಯೂನಲ್ ವಯಲೆನ್ಸ್ ಬಿಲ್ 2013. ಸೋನಿಯಾ ಎನ್ನುವ ಕಾಂಗ್ರೆಸ್ ಪಕ್ಷದ ನಾಯಕಿಯು ತಾನೇ ಹುಟ್ಟು ಹಾಕಿದ ಮತ್ತು ತಾನೇ ಅಧ್ಯಕ್ಷೆಯಾಗಿದ್ದ ನ್ಯಾಶನಲ್ ಅಡೈಸರಿ ಕೌನ್ಸಿಲ್ (ಎನ್.ಎ.ಸಿ) ಎನ್ನುವ ಖಾಸಗಿ ಸಮಿತಿಯೊಂದು ಆ ಮಸೂದೆಯ ವಕ್ಕಣೆಯನ್ನು ರಚಿಸಿದ್ದಿತು. ಯಾವುದೇ ಕೋಮುಗಲಭೆಯಲ್ಲೂ ಬಹು ಸಂಖ್ಯಾತ ಹಿಂದು ಸಮಾಜವು ಅಪರಾಧಿಯಾಗಿದೆ ಎನ್ನುವ ಪೂರ್ವಾಗ್ರಹವೇ ಆ ಮಸೂದೆಯ ಜೀವಾಳವಾಗಿದ್ದಿತು.
ಉದಾಹರಣೆಗಾಗಿ ಆ ಮಸೂದೆಯಲ್ಲಿ ಮುಸ್ಲಿಂ ದಂಗೆಯೊಂದರಲ್ಲಿ ಅತ್ಯಾಚಾರಕ್ಕೆ ಒಳಗಾದ ಹಿಂದು ಮಹಿಳೆಯು ತಾನು ದೂರನ್ನು ದಾಖಲಿಸುವಂತಿರಲಿಲ್ಲ. ಅದಕ್ಕೂ ಹೆಚ್ಚಾಗಿ ಅಲ್ಲಿ ಅಪರಾಧಿಯಾಗಿರುವ ಅತ್ಯಾಚಾರಿ ಮುಸ್ಲಿಂ ವ್ಯಕ್ತಿಯ ಪತ್ನಿಯು ಮೊದಲು ಉಲ್ಲೇಖಿಸಿದ ಹಿಂದು ಮಹಿಳೆಯ ನಿರಪರಾಧಿ ಪತಿಯು ತನ್ನ ಮೇಲೆ ಅತ್ಯಾಚಾರವನ್ನು ಮಾಡಿದನೆಂದು ದೂರು ನೀಡಿದರೆ ಅವನನ್ನು ಸಂಜ್ಞೆಯ ಅಪರಾಧದ ವಾರಂಟ್ ಇಲ್ಲದೆ ಬಂಧಿಸಿ ಜಾಮೀನು ನೀಡದೆ ಸೆರಮನೆಯಲ್ಲಿಡುವ ಅವಕಾಶವು ಆ ಮಸೂದೆಯಲ್ಲಿದ್ದಿತ್ತು. ಆ ಮಸೂದೆಯ ಪ್ರಕಾರ ಹಿಂದುಗಳು ಎಂದೂ ಕೂಡಾ ಮುಸ್ಲಿಂ ದಂಗೆಯಲ್ಲಿ ಸಂತ್ರಸ್ಥರಾಗಲು ಸಂಭವವಿಲ್ಲ. ಸಾಧ್ಯವಿರುವುದು ಅವರು ಅಪರಾಧಿಗಳಾಗಲು ಮಾತ್ರ!
ಆದರೆ ಈ ಅಲ್ಪಜ್ಞಾನದ ಮಸೂದೆಯು ಸಾರ್ವಜನಿಕ ವಿರೋಧಕ್ಕೆ ತುತ್ತಾಯಿತು. ಮುಂಬರಲಿದ್ದ ಚುನಾವಣೆಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಮತಗಳ ಬುಟ್ಟಿಗೆ ಕೈಹಾಕಿದ ಕಾಂಗ್ರೆಸ್ ಕೊನೆಯ ಹಂತದಲ್ಲಿ ಹಿಂಜರಿಯಿತು. ಮಸೂದೆಯು ಕಸದ ಬುಟ್ಟಿಗೆ ಸೇರಿತು. ಆದರೆ ಕಾಂಗ್ರೆಸ್ಸಿನ ಅಲ್ಪ ಸಂಖ್ಯಾತರ ಓಲೈಕೆಯ ಹುಟ್ಟುಗುಣವೆಲ್ಲಿ ಸುಟ್ಟಿತು? ತಮ್ಮ ಅಧಿಕಾರದ ದಾಹಕ್ಕಾಗಿ ಹಿಂದುಗಳನ್ನು ಬಲಿಕೊಡುವ ಸುಲಭದ ದಾರಿಯನ್ನು ಅದು ಹೇಗೆ ಬಿಡಬಲ್ಲದು? ಅದಕ್ಕಾಗಿ ಈಗ ಕಾಂಗ್ರೆಸ್ ಹೊಸ ದುಸ್ಸಾಹಸಕ್ಕೆ ಕೈ ಹಾಕಿದೆ.
ಅದುವೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮುಂದಿಟ್ಟು ಅವರಿಂದ ಕರ್ನಾಟಕದಲ್ಲಿ ಜಾರಿಗೊಳಿಸಲು ಹೊರಟಿರುವ ರೋಹಿತ್ ವೇಮೂಲಾ ಮಸೂದೆ-2025.
ಈ ಮಸೂದೆಯು ಸಾರ್ವತ್ರಿಕ ವ್ಯಾಪ್ತಿಯಲ್ಲಿರದೆ; ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಂಡಿದೆ. ತರುಣ ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ಪರಸ್ಪರ ವಿದ್ವೇಷದ ಭಾವನೆಯನ್ನು ಉದ್ರೇಕಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಸಾರ್ವತ್ರಿಕ ವ್ಯಾಪ್ತಿಯಿಲ್ಲದಿದ್ದರೂ ಈ ಮಸೂದೆಯು ವಿದ್ಯಾರ್ಥಿಗಳ ಜೀವನದಲ್ಲಿ ಉಂಟುಮಾಡುವ ಪರಿಣಾಮವು ಮಾತ್ರ ತೀಕ್ಷ್ಮವಾಗಿರುತ್ತದೆ, ಈ ಕಾನೂನು ಉಲ್ಲೇಖಿಸುವ ಆರೋಪವು ಸಂಜ್ಞೆಯ ಅಪರಾಧವಾದುದರಿಂದ ಹಿಂದು ವಿದ್ಯಾರ್ಥಿಯೊಬ್ಬರನ್ನು ವಾರಂಟ್ ಇಲ್ಲದೆ ಬಂಧಿಸಬಹುದು. ಅದು ಜಾಮೀನು ನೀಡಬಾರದ ಅಪರಾಧವಾದುದರಿಂದ ಆ ಹಿಂದು ತರುಣನು ಸೆರೆಮನೆಯಲ್ಲಿ ಕಳೆಯ ಬೇಕಾಗುವುದು. ಅಗಾಧ ಮೊತ್ತವನ್ನು ವ್ಯಯಿಸಿ ಜಾಮೀನು ಪಡೆಯಬೇಕು. ಅಷ್ಟರೊಳಗೆ 3 ತಿಂಗಳು ಕಳೆದನೆಂದರೂ ಕೂಡಾ ಅವನ ಓದು ಕುಂಠಿತವಾಗುತ್ತದೆ. ಅವನ ವ್ಯಾಸಂಗ ಕಾಲದ ಈ ಪ್ರಕರಣವು ಮುಂದೆಂದೂ ಅವನ ಜೀವನದಲ್ಲಿ ಕಪ್ಪು ಚುಕ್ಕೆಯಾಗುತ್ತದೆ.
ಶಿಕ್ಷಣ ಕೇಂದ್ರಗಳಾದ ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ ಓದುವ ಅಲ್ಪಸಂಖ್ಯಾತ ಮತ್ತು ಅನುಸೂಚಿತ ಸಮೂಹದ ವಿದ್ಯಾರ್ಥಿಗಳ ಘನತೆ, ಗೌರವ ಮತ್ತು ಅವರ ಹಕ್ಕುಗಳ ರಕ್ಷಣೆ, ಅವರಿಗಾಗುವ ಅನ್ಯಾಯ, ಮಾಡುವ ಭೇಧ ಭಾವನೆಗಳನ್ನು ತಡೆಯಲೆಂದು ಈ ಮಸೂದೆ ರೂಪಿತವಾಗಿದೆ ಎಂದು ಹೇಳಲಾಗಿದೆ. ಆದರೆ ಮಸೂದೆಯು ಮುಸ್ಲಿಂ ಮತ್ತು ಕ್ರೈಸ್ತರಿಗೆ ಮಾತ್ರ ಇಲ್ಲಿ ಉಲ್ಲೇಖಿಸಿದ ಅನ್ಯಾಯಗಳಾಗುತ್ತವೆ ಎಂದು ನಿರ್ಧರಿಸಿಬಿಟ್ಟಿದೆ. ಅನುಸೂಚಿತ ವಿದ್ಯಾರ್ಥಿಗಳನ್ನು ಈ ಮಸೂದೆಯ ವ್ಯಾಪ್ತಿಯಲ್ಲಿ ಸೇರಿಸಿರುವುದೇನೋ ನಿಜವೆ. ಆದರೆ ಅನುಸೂಚಿತ ವಿದ್ಯಾರ್ಥಿಗಳಿಗೆ ಹಲವು ದಶಕಗಳಿಂದ ಜಾರಿಯಲ್ಲಿರುವ ದೇಶವ್ಯಾಪಿ ಕಾನೂನುಗಳು ಸೂಕ್ತ ರಕ್ಷಣೆಯನ್ನು ನೀಡುತ್ತಲೇ ಇವೆ. ಮತ್ತು ಈ ಕಾನೂನುಗಳು ನ್ಯಾಯಾಲಯಗಳಿಂದ ಪುರಸ್ಕೃತವಾಗುತ್ತಲೇ ಇವೆ. ಹೀಗಾಗಿ ಅವರಿಗೆ ಹೊಸ ಕಾನೂನಿನ ಅಗತ್ಯವೇ ಇರದು. ಮಸೂದೆಯಲ್ಲಿ ಅನುಸೂಚಿತ ಸಮೂಹವನ್ನು ಸೇರಿಸಿರುವುದು ಹಿಂದು ಸಮಾಜದಿಂದ ಅವರನ್ನು ಪ್ರತ್ಯೇಕಿಸುವ ಪ್ರಯತ್ನವೇ ಆಗಿದೆ.
ಈ ಮಸೂದೆಯು ನಿರ್ದೇಶಿಸುವಂತೆ ಅಲ್ಪಸಂಖ್ಯಾತರಿಗೆ ತಾರತಮ್ಯ, ಬೇಧಭಾವದ “ಅನ್ಯಾಯ'ವನ್ನು ಮಾಡಿದ ಹಿಂದು ವಿದ್ಯಾರ್ಥಿಯ ಅಪರಾಧವು' ಮೊದಲ ಬಾರಿಗೆ ಎಂದಾದರೆ ಅವನಿಗೆ 1 ವರ್ಷದ ಸೆರೆ ಮತ್ತು 10 ಸಾವಿರ ಜುಲ್ಮಾನೆ ಹಾಗೂ 'ಸಂತ್ರಸ್ಥರಿಗೆ 10ಸಾವಿರ ಪರಿಹಾರವನ್ನು ನೀಡಬೇಕಾಗಿದೆ. ಇದು ಮತ್ತೆ ನಡೆದರೆ 3 ವರ್ಷ ಸಜೆ ಹಾಗೂ 1ಲಕ್ಷ ಜುಲ್ಮಾನೆಯನ್ನು ವಿಧಿಸಬಹುದಾಗಿದೆ. ನಡೆದಿತ್ತೆನ್ನಲಾದ ಈ ಆರೋಪವು ನಡೆದ ಸಂಸ್ಥೆಯ ಅನುದಾನವನ್ನು ನಿಲ್ಲಿಸಲಾಗುವುದು ಅದರೊಂದಿಗೆ ಸಂಸ್ಥೆಯು ದಂಡವನ್ನು ತೆರಬೇಕಾಗುವುದು.
ಇಷ್ಟೆಲ್ಲವಿದ್ದು ಶಿಕ್ಷಣ ಕೇಂದ್ರದಲ್ಲಿ ಅನ್ಯಾಯಗೊಳ್ಳಗಾದ ಅನುಸೂಚಿತ ವರ್ಗದವನ್ನೆಲಾದ ವಿದ್ಯಾರ್ಥಿ ರೋಹಿತ್ ವೇಮುಲಾ ದಲಿತ ವಿದ್ಯಾರ್ಥಿ ಅಲ್ಲವೆಂದು ತೆಲಂಗಾಣ ಪೊಲೀಸರು ಆ ನ್ಯಾಯಾಲಯಕ್ಕೆ ವರದಿಯನ್ನು ನೀಡಿ ಪ್ರಕರಣವನ್ನೇ ರದ್ದುಗೊಳಿಸಿದ್ದರು. ಹೈದ್ರಾಬಾದ್ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದ ಆತನು ದಲಿತ ಜಾತಿಯ ಸುಳ್ಳು ಪ್ರಮಾಣ ಪತ್ರವನ್ನು ನೀಡಿದುದರಿಂದ ತನ್ನ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡನೆಂದು ಕೂಡಾ ಹೇಳಿಕೆಗಳು ಕೇಳಿ ಬಂದಿದ್ದವು. ತನ್ನ
ಆತ್ಮಹತ್ಯೆಯ ಪತ್ರದಲ್ಲಿ ತನ್ನ ಸಾವಿಗೆ ತಾನೇ ಕಾರಣವೆಂದೂ, ಮತ್ತೆ ಯಾರೂ ಅದಕ್ಕೆ ಹೊಣೆಗಾರರಲ್ಲವೆಂದೂ ಆತನು ಬರೆದಿದ್ದನು.
ಈ ರೋಹಿತ್ ವೇಮುಲಾ ತಾನೇ ಒಂದು ಸಂಘಟನೆಯನ್ನು ಹುಟ್ಟು ಹಾಕಿದ್ದನು. 1993ರ ಮುಂಬಯಿ ಸ್ಫೋಟದ ಅಪರಾಧಿ ಯಾಕೂಬ್ ಮೆಮೋನನನ್ನು ಬೆಂಬಲಿಸಿ ಬಹಿರಂಗ ಸಭೆಯನ್ನು ನಡೆಸಿದ್ದನು. 257ಜನರ ಬಲಿತೆಗೆದುಕೊಂಡ ಆ ಪ್ರಕರಣದ ಅಪರಾಧಿ ಯಾಕೂಬನ ಅಂತ್ಯಸಂಸ್ಕಾರದ ಪ್ರಾರ್ಥನಾ ಸಭೆಯಲ್ಲೂ ಆತನು ಭಾಗವಹಿಸಿದ್ದನು. ಆತನ ತಾಯಿ ರಾಧಿಕಾರನ್ನು ಪುಸಲಾಯಿಸಿದ ಹಲವು ಹಿತಾಸಕ್ತಿಗಳ ಜನರು ಆಕೆಗೆ ಬಹು ಮೊತ್ತದ ಹಣವನ್ನು ನೀಡುವೆವೆಂದು ಹೇಳಿ ಹಲವು ನಗರಗಳಲ್ಲಿ ಹಿಂದು ವಿರೋಧಿ ಭಾಷಣವನ್ನು ಏರ್ಪಡಿಸಿದರೆಂದೂ ಕೊನೆಗೆ ಹಣವನ್ನು ನೀಡದೆ ಮೋಸಮಾಡಿದರೆಂದೂ ಆಕೆಯೇ ಹೇಳಿ ಮುಂದೆ ಅವರೊಂದಿಗೆ ಸಂಪರ್ಕವನ್ನು ಕಡಿದುಕೊಂಡಿದ್ದರು.
ಅಂತೂ ಯಾವುದೇ ಕಾರಣವನ್ನು ಮುಂದಿಟ್ಟು ಹಿಂದುಗಳನ್ನು ಆರೋಪಿಯಾಗಿಸುವ ಅಪರಾಧಿಯಾಗಿಸುವ ಕಾಂಗ್ರೆಸ್ ತಂತ್ರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅನುಸೂಚಿತ ಸಮಾಜವನ್ನು ಪ್ರತ್ಯೇಕಿಸುವ ಹುನ್ನಾರವು ಮತ್ತೆ ಕಾರ್ಯವೆಸಗುತ್ತಿದೆ. ರೋಗವೇ ಇಲ್ಲದೆ ಔಷಧಿಯನ್ನು ನೀಡಿ ರೋಗಿಯೆನಿಸುವವನನ್ನು ಶೋಷಿಸುವುದು ಮುಂದುವರೆಯುತ್ತಿದೆ.
ಜ್ಞಾನ ಜ್ಯೋತಿ
ದೇವಿ ಶಾರದೆಯು ಜ್ಞಾನ ಶಕ್ತಿಯಾಗಿರುವಳು. ಸರಸ್ವತಿ ಎನ್ನುವ ಹೆಸರೇ ಜ್ಞಾನದ ಪ್ರವಾಹ ಎಂದು ಅರ್ಥ ನೀಡುವುದು. ಸರಸ್ವತೀ ಅಥವಾ ಬ್ರಾ ಎನ್ನುವ ಮೂಲಿಕೆಯು ಸ್ಮರಣೆ ಮತ್ತು ನೆನಪನ್ನು ಬೆಳಸುವ ಶಕ್ತಿಯನ್ನು ಹೊಂದಿದೆ.
ಹಯಗ್ರೀವ ದೇವರು ವಿಷ್ಣುವಿನ ಅವತಾರ ಹಯಗ್ರೀವನನ್ನು ಜ್ಞಾನಾನಂದಮಯಂ ಎಂದೂ, ಆಧಾರಂ ಸರ್ಪ ವಿದ್ಯಾನಾಂ ಎಂದು ಸ್ತುತಿಸುತ್ತಾರೆ. ಹಯಗ್ರೀವ ದೇವರು ಕೂಡಾ ಜ್ಞಾನದ ಪ್ರತೀಕ, ದಕ್ಷಿಣಾ ಮೂರ್ತಿಯು ಶಿವನ ಪ್ರಕಟರೂಪ, ಮಸ್ತಿಷ್ಕದ ಪೂರ್ಣ ಪ್ರಕಾಶಕ್ಕೆ ಆಧಾರವೇ ದಕ್ಷಿಣಾ ಮೂರ್ತಿ, ಷಣ್ಮುಖನು ಅಥವಾ ಕುಮಾರ ಸ್ವಾಮಿಯು ವಾಣಿ ಅಥವಾ ಮಾತಿನ ಪ್ರದಾಯಕನು. ಕುಮಾರ ಸ್ವಾಮಿಯ ನೂರೆಂಟು ನಾಮ ಪಠಣದಿಂದ 'ಮೂಕೋವಾಚಸ್ಪತಿರ್ ಭವೇತ್' ಎನ್ನುತ್ತದೆ. ಮೂಕನು ಕೂಡಾ ವಾಸ್ಪಟುತ್ವವನ್ನು ಹೊಂದುತ್ತಾನೆ. ಹೀಗೆ ದೇವರೇ ಗುರುವಾಗಿ ಬಂದು ಉದ್ಧರಿಸುವ ದಾರಿ ನಮ್ಮ ಪರಂಪರೆ.