Hindu Vani
Index
ಪ್ರತಿಧ್ವನಿ
ಶ್ಲಾಘನೀಯ ಲೇಖನ
ಹಿಂದುವಾಣಿಯ ಜುಲೈ 20250 ಮುಖಪುಟದ 'ಅಮ್ಮನ ಕಣ್ಣೀರು' ಚಿತ್ರವೂ ಅದಕ್ಕೆ ಪೂರಕವಾಗಿ ಒಳಪುಟ ಲೇಖನ 'ಕತ್ತಲಲ್ಲೇ ಕಳೆದು ಹೋಗುವ ಕಣ್ಣುಗಳು' ಅತ್ಯಂತ ಸಂವೇದನಶೀಲ ಬರಹವಾಗಿದೆ. ಬೇರೆ ಕಾಣದ ಯಾವುದೇ ಪತ್ರಿಕೆಗೆ ಈ ವಿಚಾರವನ್ನು ಹಿಂದುವಾಣಿಯು ಪ್ರಕಟಿಸಿರುವುದು ಶ್ಲಾಘನೀಯ.
- ವಿ.ಸಿ.ಶೇಖರ್, ಬೆಂಗಳೂರು
ಕಳಂಕ ಹಚ್ಚಿದವರು
ಸ್ವಾತಂತ್ರ್ಯ ಬಂದ ಹೊಸತರಲ್ಲಿ ಶಿಕ್ಷಣ ಇಲಾಖೆಗೆ ನಿಯುಕ್ತಿಗೊಂಡ 5 ಮಂದಿ ಮುಸ್ಲಿಂ ಮಂತ್ರಿಗಳು ಇತಿಹಾಸಕ್ಕೆ ಕಳಂಕವನ್ನು ಹಚ್ಚಿದುದು ಮಾತ್ರವಲ್ಲ; ಹಿಂದು ಧರ್ಮ ಮತ್ತು ಪರಂಪರೆಯನ್ನು ತುಚ್ಚವೆನ್ನುವಂತೆ ಚಿತ್ರಿಸಿದರು. ಇಂದು ಎಳೆಯ ಪೀಳಿಗೆಯಲ್ಲಿ ಕಾಣುವ ನಾಸ್ತಿಕತೆ, ಹಿರಿಯರ ಕುರಿತು ಅಗೌರವ, ಮತಾಂತರ, ಜಿಹಾದಿ ಬಲೆಗೆ ಪಕ್ಕಾಗುವ ಅನರ್ಥಗಳೆಲ್ಲವೂ ಈ ಮುಸ್ಲಿಂ ಪ್ರೇರಿತ ಶಿಕ್ಷಣ ಕ್ರಮದಿಂದ ಬಳುವಳಿಯಾಗಿ ಬಂದಿದೆ.
- ಶಂಕರನಾರಾಯಣ, ಹಾಸನ
ಕ್ರಾಂತಿಯ ಕಿಚ್ಚು
ನಾಲ್ವರು ಕ್ರಾಂತಿಕಾರಿಗಳು ಗಲ್ಲಿನ ಶಿಕ್ಷೆಯನ್ನು ಎದುರಿಸಿದ ರೀತಿ, ಇನ್ನು ಕಾಕೋರಿ ಪ್ರಕರಣದಲ್ಲಿ ಸೆರೆಮನೆಯಲ್ಲಿ ಉಳಿದವರು ಪಟ್ಟ ಪಾಡು, ಇತ್ತ ಅವರ ಕುಟುಂಬಗಳು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಮನಕಲಕುವಂತಿವೆ. ಆದರೆ ಇಂತಹ ಅಸಾಮಾನ್ಯ ತ್ಯಾಗ ಬಲಿದಾನಗಳ ನೆನಪಿಲ್ಲದ ರಾಜಕಾರಣಿಗಳ ಕೈಗೆ ದೇಶ ಸಿಗುವಂತಾದುದು ಮಾತ್ರ ವಿಪರ್ಯಾಸ.
- ಶೀಲಾರಾವ್, ಹಿರಿಯೂರು
ಎಷ್ಟೊಂದು ಮಹಾ ಮಹಿಮರು!
ಡಾ|| ಜಿ.ಮಾಧವಿಲತಾರವರ ಪರಿಚಯವನ್ನು ಹಿಂದುವಾಣಿಯು ಮಾಡಿದುದು ಸ್ತುತ್ಯವೆ. ಪುರುಷರಿಗೆ ಮಾತ್ರ ಸರಿಯೆನಿಸಬಹುದಾದ ಇಂಜಿನಿಯರಿಂಗ್ ಸಾಧನೆಯನ್ನು ಆಕೆ ಸಾಧಿಸಿದುದು ಎಲ್ಲಾ ಮಹಿಳೆಯರಿಗೆ ಅನುಕರಣೀಯ.