Index
ಪ್ರೇರಣೆ
ಮಾನವಂದನ ಪಥ ಸಂಚಲನ
- ಮಂಜುನಾಥ ರೆಡ್ಡಿ, ಕಾರ್ಯದರ್ಶಿ, ಹಲಸೂರು ಜಿಲ್ಲೆ
ಬೆಂಗಳೂರು ಮಹಾನಗರದಲ್ಲಿರುವ ಹಲಸೂರು ಜಿಲ್ಲೆಯು ಪ್ರಾಚೀನ ಎನ್ನಬಹುದಾದ ಬಡಾವಣೆ, ಚೋಳರ ಕಾಲದ ಪುರಾತನ ದೇವಾಲಯಗಳಿರುವ ಜಾಗ, ಮುಂದೆ ಬ್ರಿಟಿಷರ ಕಾಲಗತಿಯಲ್ಲಿ ಅವರ ಸೈನ್ಯ ಠಾಣೆಗಳಿದ್ದ ದಂಡು ಪ್ರದೇಶವಿದು. ಸಹಜವಾಗಿ ಮತಾಂತರಿತ ಕ್ರೈಸ್ತರು ಹೆಚ್ಚು ಸಂಖ್ಯೆಯಲ್ಲಿರುವ ಸ್ಥಳ,
ರಾಜಮಾತೆ ಅಹಲ್ಯಾದೇವಿ ಹೋಳ ಮತ್ತು ರಾಣಿ ದುರ್ಗಾವತಿಯವರ ಸ್ಮರಣೆಗಾಗಿ ನಡೆದ ಕಾರ್ಯಕ್ರಮದಲ್ಲಿ ಹಲಸೂರು ಜಿಲ್ಲೆಯ ದುರ್ಗಾವಾಹಿನಿ ವಿಭಾಗವು ಪಥ ಸಂಚಲನವನ್ನು ಹಮ್ಮಿಕೊಂಡಿತು. ಇದರಲ್ಲಿ 188 ದುರ್ಗೆಯರು ಪೂರ್ಣಗಣ ವೇಷಧಾರಿಗಳಾಗಿ ಘೋಷ್ ವಾದನದಲ್ಲಿ ಸಂಚಲನವನ್ನು ನಡೆಸಿದರು. ಮಾತೃಶಕ್ತಿ ಮತ್ತು ದುರ್ಗಾವಾಹಿನಿಯಿಂದಲೇ ಸಂಚಾಲಿತವಾದ ಈ ಸಭೆಗಳು ಮತ್ತು ಸಂಚಲನಗಳು ಹಲಸೂರಿನ ನಾಗರಿಕರ ಪೂರ್ಣ ಬೆಂಬಲವನ್ನು ಪಡೆದು ಯಶಸ್ವಿಯೆನಿಸಿತು. ಹೆಜ್ಜೆ ಹೆಜ್ಜೆಗೂ ಬಿಡಿಸಿದ ಬಣ್ಣದ ರಂಗೋಲಿಗಳು, ಸ್ವಾಗತದ ಪುಷ್ಪ ವೃಷ್ಟಿಗಳು ಕಾರ್ಯಕ್ರಮವನ್ನು ಆಹ್ಲಾದ ಗೊಳಿಸಿದವು. ಇದೇ ಸಂದರ್ಭದಲ್ಲಿ (09.02.2025 ಭಾನುವಾರ) ದಕ್ಷಿಣ ಪ್ರಾಂತದ ಅಧ್ಯಕ್ಷರೂ ಕೇಂದ್ರೀಯ ಉಪಾಧ್ಯಕ್ಷರೂ ಆದ ಡಾ|| ವಿಜಯಲಕ್ಷ್ಮೀ ದೇಶಮಾನೆಯವರು ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆಯಾದ ಸಂದರ್ಭದ ನಾಗರೀಕರ ಅಭಿನಂದನೆಯನ್ನು ಅರ್ಪಿಸಲಾಯಿತು. ಅವರೂ ಸಂಚಲನದಲ್ಲಿ ಧ್ವಜ ವಾಹನದಲ್ಲಿ ಇದ್ದುದು ಜನರ ಉತ್ಸಾಹವನ್ನು ಹೆಚ್ಚಿಸಿತು.
ಮಾನವಂದನ ಪತಸಂಚಲನ
ಮಾನವಂದನ ಪತಸಂಚಲನ