Index
ಸಂಪಾದಕೀಯ
ಸಂಪಾದಕೀಯ
ಕಬಳಿಸಲು ಕಾದಿರುವ ಕಬಂಧ
ರಾಮಾಯಣದ ಅರಣ್ಯ ಕಾಂಡದಲ್ಲಿ ಕಬಂಧನೆಂಬ ರಾಕ್ಷಸನ ಪ್ರವೇಶವಾಗುತ್ತದೆ. ಮಹಾಕಾಯನಾದ ಅವನಿಗೆ ತಲೆ ಮತ್ತು ಕುತ್ತಿಗೆಗಳಿಲ್ಲ. ಹೊಟ್ಟೆಯಲ್ಲಿ ಬಾಯಿಕಾಣಿಸುತ್ತದೆ. ಬಲಯುತವಾದ ನೀಳ ಕೈಗಳಿವೆ. ಚಾಚಿದ ಕೈಗಳಿಗೆ ಸಿಕ್ಕಿದವರು ತಪ್ಪಿಸಿ ಹೋಗುವಂತೆಯೇ ಇಲ್ಲ. ಅಪಹೃತಳಾದ ಸೀತೆಯನ್ನು ಹುಡುಕುತ್ತಾ ಹೊರಟ ರಾಮಲಕ್ಷ್ಮಣರಿಬ್ಬರೂ ಅವನ ಕೈಗಳಿಗೆ ಸಿಕ್ಕರು. ಇಬ್ಬರನ್ನೂ ಅಮುಕಿ ನುಂಗಹೊರಟ ಕಬಂಧನ ತೋಳುಗಳನ್ನು ರಾಮಲಕ್ಷ್ಮಣರು ಕಡಿದು ಉರುಳಿಸಿದಾಗ ಅವನು ತನಗೆ ಒದಗಿದ ಶಾಪದ ಪ್ರಸಂಗವನ್ನು ವಿವರಿಸುತ್ತಾನೆ.
ಅಮೆರಿಕಾ ದೇಶದ ವೃತ್ತಾಂತವೂ ಕೂಡ ಈ ಕಬಂಧನಂತೆ ಇದೆ. ಉಳಿದೆಲ್ಲ ದೇಶಗಳನ್ನು ವಿವಿಧ ರಾಜತಾಂತ್ರಿಕ ಕಾರಣಗಳಿಂದ ಸಂಪರ್ಕಿಸಿ ನಂತರ ನಿಧಾನವಾಗಿ ಅವುಗಳ ಆಂತರಿಕ ವ್ಯವಸ್ಥೆಗಳಲ್ಲಿ ಹಸ್ತಕ್ಷೇಪ ನಡೆಸಿ ಅದನ್ನು ತನ್ನ ಹಿತಾಸಕ್ತಿಗಳಿಗೆ ಒಗ್ಗಿಸಿಕೊಳ್ಳುವುದು ಅಮೆರಿಕಾದ ವಿದೇಶ ನೀತಿ, ಈಚೆಗೆ US Agency For International Devlopment (USAID) ಎನ್ನುವ ಅಮೆರಿಕಾ ಸರ್ಕಾರದ ಒಂದು ಅಂಗ ಸಂಸ್ಥೆಯ ಕುರಿತು ಬಹಿರಂಗ ಚರ್ಚೆಯು ಆರಂಭವಾಗಿದೆ. ನೂರಕ್ಕೂ ಹೆಚ್ಚು ದೇಶಗಳಲ್ಲಿ ಅಲ್ಲಿಯ ಸರ್ಕಾರಗಳನ್ನು ಅಮೆರಿಕಾದ ಕೈಗೊಂಬೆಯಾಗಿಸಲು ಸಾಮಾನ್ಯ ಊಹೆಗೂ ನಿಲುಕದ ಕಾರ್ಯಕ್ರಮಗಳನ್ನು ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಂಸ್ಥೆಯಿದು. ಮುಖ್ಯವಾಗಿ ಏಷ್ಯಾ ಮತ್ತು ಆಫ್ರಿಕಾದ ಬಡ ದೇಶಗಳಲ್ಲಿ ಬಡತನವನ್ನು ಹೋಗಲಾಡಿಸುವ ನೆರವು ಸಂಸ್ಥೆಯ ಮುಖವಾಡವನ್ನು ಧರಿಸಿ ಅಮೇರಿಕಾದ ರಾಜ ತಾಂತ್ರಿಕ ಒಳಸಂಚುಗಳನ್ನು ರೂಪಿಸುವುದೇ ಇದರ ಉದ್ದೇಶವಾಗಿದೆ. 425ಲಕ್ಷ ಕೋಟಿ ಡಾಲರುಗಳ ಅನುದಾನದೊಂದಿಗೆ ಅದು ಕೈಗೊಳ್ಳುವ ಕುತಂತ್ರಗಳು ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಸೋಗಿನಲ್ಲಿ ಹಲವು ದೇಶಗಳಲ್ಲಿ ಅರಾಜಕತೆಯನ್ನು ಹಬ್ಬಿಸುವ, ರಾಜಸತ್ತೆಯನ್ನು ಬದಲಿಸುವ ಕಾರಸ್ಥಾನಗಳಲ್ಲಿ ಯಶಸ್ವಿಯಾಗುತ್ತದೆ.
ಭಾರತದಲ್ಲೂ ಅಮೆರಿಕದ ಹಿತಾಸಕ್ತಿಯನ್ನು ರಕ್ಷಿಸಲು ಇಲ್ಲಿಯ ಚುನಾವಣೆಗಳಲ್ಲಿ ಹಸ್ತಕ್ಷೇಪವನ್ನು ನಡೆಸುವ 182 ಕೋಟಿ ಡಾಲರ್‌ಗಳನ್ನು ವಿನಿಯೋಗಿಸುವ ಕರಾಳ ಯೋಜನೆಯೊಂದು ಈಗ ಬೆಳಕಿಗೆ ಬಂದಿದೆ.
ಭಾರತದಲ್ಲಿ ತನ್ನ ದುರುದ್ದೇಶಗಳನ್ನು ಸಾಧಿಸಲು ಯು.ಎಸ್.ಏಡ್ ಇಲ್ಲಿಯ ಮಾಧ್ಯಮಗಳನ್ನು ರಾಜತಾಂತ್ರಿಕ ಜನರನ್ನು, ಶಾಸಕರು, ಸಿನಿಮಾ ಮಂದಿಯನ್ನು ಅಷ್ಟೇಕೆ ನ್ಯಾಯಾಂಗದ ವ್ಯಕ್ತಿಗಳನ್ನು ಉಪಯೋಗಿಸಿದೆ. ಭಾರತೀಯರ ಧರ್ಮನಿಷ್ಠೆ ಮತ್ತು ಸಂಸ್ಕೃತಿಯ ಪ್ರೇಮವನ್ನು ನಾಶಪಡಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಅಮೆರಿಕಾದ
ಸಂಸ್ಥೆಯು ಇಲ್ಲಿಯ ಕಮ್ಯುನಿಸ್ಟ್ ಹಸ್ತಕರಿಗೆ, ಕ್ರೈಸ್ತ ಮಿಷನರಿಗಳಿಗೆ, ಹಾಗೂ ಇಸ್ಲಾಮಿ ಭಯೋತ್ಪಾದಕರಿಗೂ ಧನ ಸಹಾಯ ಮಾಡಿ ಅವರಿಗೆ ವ್ಯೂಹಾತ್ಮಕ ನೆರವು ನೀಡುವುದನ್ನು ವ್ಯವಸ್ಥಿತವಾಗಿ ಮಾಡುತ್ತದೆ.
ದೇಶದ 1960ರ ದಶಕದಲ್ಲಿ ಅಮೆರಿಕಾದ ಪ್ರಭಾವವನ್ನು ಹೆಚ್ಚಿಸಲು ಯಾವುದೇ ದಾರಿಯಾದರೂ ಸರಿಯೇ ಎನ್ನುವ ಧೋರಣೆಯೊಂದಿಗೆ ಈ USAID ಸಂಸ್ಥೆಯು ಹುಟ್ಟಿಕೊಂಡಿತು. ಅದು ಜಾನ್ ಎಫ್ ಕೆನಡಿ ಮತ್ತು ಲಿಂಡನ್ ಬಿ ಜಾನ್ಸನ್ ಆಡಳಿತ ಕಾಲ. ಇದೇ ಕಾಲಾವಧಿಯಲ್ಲಿ ಭಾರತದ ಬಡತನ ಮತ್ತು ಹಸಿವನ್ನು ನೀಗಿಸಲೆಂದು ಪಿ.ಎಲ್ 480 ಎನ್ನುವ ಅವಮಾನಕಾರಿ ಒಪ್ಪಂದವೊಂದು ಜಾರಿಗೆ ಬಂದಿತು. ಅದರಂತೆ ಅಮೆರಿಕದಲ್ಲಿ ಬಳಕೆಯಾಗದ ಕಳಪೆ ಗೋಧಿಯನ್ನು ಭಾರತದಲ್ಲಿ ಗುಡ್ಡೆ ಹಾಕಲು ಆಡಳಿತವು ನಿರ್ಧರಿಸಿತು. ಅಷ್ಟಾದರೂ ಸಿಗುವುದು ಮಹಾಭಾಗ್ಯವೆನ್ನುವಂತೆ ಭಾರತ ಸರ್ಕಾರವು ಆ ಗೋಧಿ ಹೊತ್ತು ತಂದ ಹಡಗುಗಳನ್ನು ಸ್ವಾಗತಿಸಿತು. ಇದರೊಂದಿಗೆ ಕಸ-ಕಡ್ಡಿ, ಕಲೆ-ಗಿಡಗಳ ಬೀಜ, ಪರಾಗಗಳು, ಗೋಧಿಯೊಂದಿಗೆ ಬೆರೆತು ಭಾರತದ ನೆಲವನ್ನು ಹೊಲವನ್ನು ಕಲುಷಿತಗೊಳಿಸಿದವು. ಇಂದು ದೇಶವ್ಯಾಪಿಯಾಗಿ ಬೆಳೆದ, ಚರ್ಮ ಕಣ್ಣು ಮತ್ತು ಶ್ವಾಸಕೋಶಗಳಿಗೆ ಅಪಾಯಕಾರಿಯಾಗಿರುವ ಕಾಂಗ್ರೆಸ್ ಗಿಡವು ಅದೇ ಗೋಧಿಯೊಂದಿಗೆ ಬಂದದ್ದು. ಭಾರತದ ಭೂಮಿಯನ್ನು ವಿಷಮಯವಾಗಿಸಲು ಮಾಡಿದ ಯೋಜನಾ ಬದ್ಧ ನಿರ್ಧಾರವಿದೆಂದು ಇಂದು ಎಲ್ಲರೂ ನಂಬಿರುವರು. ಅಮೆರಿಕಾದ ಈ ತಂತ್ರಕ್ಕೆ ಬಲಿಯಾಗದ ಜನವರ್ಗಗಳೆ ಇಲ್ಲವೆನ್ನಬಹುದು. ಸ್ವಯಂ ಸೇವಾ ಸಂಸ್ಥೆಗಳು ರಚನಾತ್ಮಕ ಕಾರ್ಯಕ್ರಮಗಳ ಸೋಗಿನಲ್ಲಿ ಹಲವು ಭಾರತ ವಿರೋಧಿ ಕಾರ್ಯಕ್ರಮಗಳನ್ನು, ಸರ್ವೇಕ್ಷಣೆಗಳನ್ನು ಸಂಸ್ಥೆಯ ಪರವಾಗಿ ಹಮ್ಮಿಕೊಳ್ಳುತ್ತಿವೆ. ಹೊರಗುತ್ತಿಗೆಯನ್ನು ಪಡೆಯುವ ಈ ಸಂಸ್ಥೆಗಳು ಈ ಸಂಸ್ಥೆಗಳು ಅಲ್ಲಿಂದ ಊಹೆಗೂ ನಿಲುಕದ ಅನುದಾನಗಳನ್ನು ಪಡೆಯುತ್ತವೆ. ಅದು ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ವಿದೇಶಗಳಲ್ಲಿ ವಿಲಾಸಿ ಪ್ರವಾಸಗಳನ್ನು ಏರ್ಪಡಿಸುತ್ತದೆ. ಪ್ರಾಧ್ಯಾಪಕರು ಅಮೆರಿಕದ ವಿಶ್ವವಿದ್ಯಾಲಯಗಳ ಸೆಮಿನಾರ್‌ಗಳಿಗೆ ಆಹ್ವಾನಿತರಾಗಿರುತ್ತಾರೆ. ನ್ಯಾಯಾಂಗ ಅಧಿಕಾರಿಗಳ ಮಕ್ಕಳು ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ. ಇವರೆಲ್ಲರೂ ಸಮಯ ಬಿದ್ದಾಗ ಅಮೆರಿಕದ ಪರವಾಗಿ ದನಿಯೆತ್ತಿದರೆ ಸಾಕು ಎನ್ನುವ ಅಲಿಖಿತ ಒಪ್ಪಂದಗಳಾಗುತ್ತವೆ.
ಎಲ್ಲೂ ಅನುಮಾನಗಳಿಗೆ ಆಸ್ಪದವಾಗದಂತೆ ಆಯಕಟ್ಟಿನ ಜಾಗಗಳಲ್ಲಿ ಅಮೆರಿಕಾದ ಹಸ್ತಕರು ಸ್ಥಾಪಿತರಾಗಿರುವರು. ಇದು ಎಷ್ಟು ವ್ಯಾಪಕವೆಂದರೆ; ವೇದ ವೇದಾಂತಗಳನ್ನು ಶ್ರುತಿ ಸ್ಮೃತಿಗಳನ್ನು, ಪ್ರಾಚೀನ ಕಾವ್ಯ ನಾಟಕಗಳ ವಾಗರ್ಥಗಳನ್ನು ವ್ಯಾಖ್ಯಾನಿಸಲು, ಅಂತಿಮ ನಿರ್ಣಯಗಳನ್ನು ನೀಡಲು ಅಮೆರಿಕಾದ 'ಪಂಡಿತರೇ ಯೋಗ್ಯರೆನ್ನುವ ಪ್ರತೀತಿ ಸ್ಥಾಪಿತವಾಗಿದೆ. ಹೇಳಬೇಕೆಂದರೆ “ಹಿಂದೂಸ್ ಫಾರ್ ಹೂಮನ್ ರೈಟ್ಸ್' ಎನ್ನುವ ಸಂಸ್ಥೆಯು ಭಾರತದ ವಿರೋಧಿ ಎನ್ನುವ ಅಸಲಿ ಸ್ಥಿತಿಯನ್ನು ಯಾರೂ ಊಹಿಸದಂತಹ 'ಇಕೋಸಿಸ್ಟಮ್' ರಚನೆಯಾಗಿ ಬಿಟ್ಟಿದೆ. ರಾಹುಲ ಗಾಂಧಿಯ ಆಪ್ತಗುರು ಸತ್ಯನಾರಾಯಣ ಪಿತ್ರೋಡನ 'ಗ್ಲೋಬಲ್ ನಾಲೆಡ್ಜ್ ಇನಿಷಿಯೇಟಿವ್ ಸಂಸ್ಥೆ ಭಾರತ ವಿರೋಧಿ ದೇಶಗಳನ್ನು ಮತ್ತು ವಿಚಾರಗಳನ್ನು ಕ್ರೋಡೀಕರಿಸುತ್ತಿರುವುದು ಎಲ್ಲೂ ಉಲ್ಲೇಖಗೊಳ್ಳದಂತೆ
ನೋಡಿಕೊಳ್ಳಲಾಗುತ್ತದೆ. ಭಾರತದಲ್ಲಿ ಈ ಕಾರ್ಯತಂತ್ರಗಳನ್ನು ವಿಚಾರವಾದಿಗಳೆನ್ನುವ ಕಮ್ಯೂನಿಷ್ಠರು ಮತಾಂತರಗೊಂಡ ಕ್ರಿಸ್ಟೋಸ್ತರು, ಇನ್ನು ಅರಾಜಕತೆಯನ್ನು ಸೃಷ್ಟಿಸಲೆಂದೇ ನೇಮಕಗೊಂಡವರು ರೂಪಿಸುವರು. ರಾಜೀವ ಗಾಂಧಿಯ ಚಾರಿಟೇಬಲ್ ಟ್ರಸ್ಟ್‌ಗೆ ಜಮೆಯಾಗುತ್ತಿರುವ ಹಣ ಎಲ್ಲಿಂದ ಪಾವತಿಯಾಗುತ್ತಿದೆ ಎನ್ನುವ ಸ್ಕೂಲ ಮಾಹಿತಿಯು ಈಗ ಬಹಿರಂಗವಾಗುತ್ತಿದೆ.
ಈಗಾಗಲೇ ನೇಪಾಳವನ್ನು ನಾಸ್ತಿಕ ದೇಶವನ್ನಾಗಿ ಮಾಡುವುದರಲ್ಲಿ ಅಮೆರಿಕಾದ ಈ ಸಂಸ್ಥೆ ಮುಂದುವರೆಯುತ್ತಿದೆ. ಈ ಕಾಲದ ಪೀಳಿಗೆಗಳಿಗೆ ಅಪ್ಯಾಯಮಾನವೆನಿಸುವ ತೃತೀಯ ಲಿಂಗಿಗಳ ಸಮಸ್ಯೆ, ಹೆಚ್.ಐ.ವಿ ನಿರ್ಮೂಲನೆಗಳೊಂದಿಗೆ ಶಿಕ್ಷಣ ನೀತಿಯಲ್ಲಿ ಭಾರತೀಯ ವಿಚಾರಧಾರೆಯನ್ನು ಬೇರ್ಪಡಿಸುವುದು, ವಿದ್ಯಾರ್ಥಿಗಳನ್ನು ಅರಾಜಕ ಶಕ್ತಿಗಳನ್ನಾಗಲು ಪ್ರೋತ್ಸಾಹಿಸುವುದೆಲ್ಲವೂ ಇಂದು ವಿರೋಧದ ವಿವಿಧ ಹಂತಗಳ ಯೋಜನೆಗಳಾಗಿವೆ. ಅಧಿಕಾರಕ್ಕಾಗಿ ಭಾರತವನ್ನೇ ಮಾರಲು ಸಿದ್ಧವಿರುವ ವ್ಯಕ್ತಿಗಳಿರುವಾಗ ಕೊಳ್ಳಲು ಸಿದ್ಧರಿರುವವರಿಗೇನು ಕಮ್ಮಿ?
ನಾಗ ಸಾಧು ಎಂದರೆ
ನಾಗಾ ಸಾಧು ಆಗುವುದೆಂದರೆ ಅದು 12 ವರ್ಷಗಳ ತಪಶ್ಚರ್ಯ. ಕಠಿಣ ಸಾಧನೆ. ನಾಗಾ ಸಾಧುವಿನ ಜೀವನವೇ ಒಂದು ಸಂಕೀರ್ಣ ವೃತ್ತಾಂತ, ಸಾಧುವು ಬೈರಾಗಿಯಾಗುತ್ತಲೇ ಜಗತ್ತಿನ ಲೌಕಿಕವನ್ನೇ ತ್ಯಜಿಸುವ ನಿರ್ಧಾರವನ್ನು ಕೈಗೊಳ್ಳಬೇಕು. ಜನ ಸಂಪರ್ಕವಿಲ್ಲದ ಅರಣ್ಯ ಪ್ರದೇಶ ಪರ್ವತ ಗಹ್ವರಗಳನ್ನು ತಲುಪಬೇಕು. ಆಖಾಡಗಳಲ್ಲಿ ಸಾಧುಗಳಿಗೆ ಸಂಘಟಿತ ವೈರಾಗ್ಯದ ಜೀವನಕ್ಕೆ ಒಡ್ಡಿಕೊಳ್ಳುವುದನ್ನು ಹೇಳಿಕೊಡಲಾಗುವುದು. ದಿನದಲ್ಲಿ ಏಳು ಮನೆಗಳ ಭಿಕ್ಷೆಯನ್ನು ಸ್ವೀಕರಿಸುವ ನಿಯಮ ಅವರದ್ದು. ಆ ಮನೆಗಳಲ್ಲಿ ಅಂದು ಭಿಕ್ಷೆಯು ದೊರಕಲಿಲ್ಲವಾದರೆ ಹಸಿವಿನಿಂದಲೇ ಇರುವುದು ನಿಯಮವಾಗಿರುತ್ತದೆ. ದಿನದಲ್ಲಿ ಒಂದು ಬಾರಿ ಮಾತ್ರವೇ ಆಹಾರವನ್ನು ಉಣ್ಣುವುದು ಅವರ ರೀತಿ, ಸಮರ ಕಲೆಯಲ್ಲಿ ನಿಷ್ಣಾತರಾದ ನಾಗಾಸಾಧುಗಳು ನಗ್ನರಾಗಿರುತ್ತಾರೆ. ಅವರದ್ದೇ ಆದ ಆಖಾಡಗಳಲ್ಲಿ ಅವರು ಇರುತ್ತಾರೆ. ಪ್ರಯಾಗದ ಕುಂಭಮೇಳದಲ್ಲಿ ಅವರವರ ಅಖಾಡಗಳ ಸ್ನಾನದ ಕಾರ್ಯಕ್ರಮವು ಮುಗಿಯುತ್ತಿದ್ದಂತೆ ಈ ಎಲ್ಲಾ ಸಾಧುಗಳು ಅವರವರ ಸ್ಥಾನಗಳಿಗೆ ಮರಳಿ ಕಣ್ಮರೆಯಾಗಿ ಹೋಗುತ್ತಾರೆ.
- ಕುಲದೀಪ್ ರಾವಲ್, ಕುಂಭಮೇಳ