Logo

VHP PUBLICATIONS

Hindu Vani
expand_more

ಮಹಾಕುಂಭ

ಮಹಾಕುಂಭ

ಉತ್ತರ ಪ್ರದೇಶದ ಹೊಸಜಿಲ್ಲೆ 'ಮಹಾಕುಂಭ


ಪ್ರಯಾಗರಾಜದ ಮಹಾಕುಂಭದ ಸುತ್ತಲಿನ ಪ್ರದೇಶವನ್ನು ಉತ್ತರ ಪ್ರದೇಶ ಸರ್ಕಾರವು ಹೊಸ ಜಿಲ್ಲೆಯೆಂದು ಘೋಷಿಸಿದೆ. ತಾತ್ಕಾಲಿಕವಾದ ಈ ವ್ಯವಸ್ಥೆಯಲ್ಲಿ ಈ ಜಿಲ್ಲೆಯ ಹೆಸರು 'ಮಹಾಕುಂಭ ಮೇಳ' ಎಂದಿದೆ. ಆಡಳಿತ ವ್ಯವಸ್ಥೆಯಲ್ಲಿ ವ್ಯತಸ್ಥವಾಗದೆ ಶೀಘ್ರ ನಿರ್ಣಯದ ಕಾರಣಕ್ಕಾಗಿ ಇದರ ಅಗತ್ಯ ಬಂದಿತು. ಈ ನಿರ್ಧಾರದಿಂದಾಗಿ ಆಡಳಿತದಲ್ಲಿ ಶೀಘ್ರ ಸಮನ್ವಯತೆಯನ್ನು ತರಲು ಸಾಧ್ಯವಾಗಿದೆ.


- ಕುಲದೀಪ್ ರಾವಲ್

ಕುಂಭ ಮೇಳ


ಇಂತಹ ಅದ್ಭುತ ಇನ್ನೆಲ್ಲಿ ಕಾಣಲು ಸಾಧ್ಯ!


- ಶರಣ್ ಕುಮಾರ್ ಪಂಪ್‌ವೆಲ್, ಮಂಗಳೂರು


ಫೆಬ್ರವರಿ 12ರ ಮಾಘ ಹುಣ್ಣಿಮೆಯ ಅಮೃತ ಸ್ನಾನದ (ಶಾಹಿ ಸ್ನಾನ) ದಿನ ಕೋಟಿ ಕೋಟಿ ಭಕ್ತರನ್ನು ಅಮ್ಮ ಗಂಗೆಯ ಮಡಿಲಲ್ಲಿ ಕಂಡಾಗ, ಆ ದೃಶ್ಯವನ್ನು ನೋಡಿದಾಗ ಸಂಪೂರ್ಣ ಭಾರತವನ್ನು ನೋಡಿ ಅನುಭವಿಸಿದ ಆನಂದವು ಉಕ್ಕಿತು. ಇದಕ್ಕಿಂತ ಇನ್ನೊಂದು ಅದ್ಭುತವು ಇದ್ದರೆ ಅದು ಈ ನಮ್ಮ ಪುಣ್ಯಭೂಮಿಯಲ್ಲಿ ಮಾತ್ರ ಸಾಧ್ಯ. ಜಗತ್ತಿನಲ್ಲಿ ಸಾಧ್ಯವಿಲ್ಲದ ಇಂತಹ ವಿಶೇಷಗಳು ನಮ್ಮ ಭಾರತದಲ್ಲಿ ಮಾತ್ರ ಕಾಣಿಸಿಗುತ್ತವೆ.


144 ವರ್ಷಕೊಮ್ಮೆ ನಡೆಯುವ ಮಹಾ ಕುಂಭಮೇಳದ ಈ ಸಂದರ್ಭ ಪ್ರಯಾಗರಾಜದಲ್ಲಿ ಕೋಟ್ಯಾಂತರ ಭಕ್ತರು ಪುಣ್ಯ ತೀರ್ಥ ಸ್ನಾನದಲ್ಲಿ ಭಾಗವಹಿಸುವುದನ್ನು ನೋಡಿದಾಗ ನಮ್ಮ ಶ್ರದ್ದೆ, ಭಕ್ತಿ, ನಂಬಿಕೆಗಳು ಎಷ್ಟು ಬಲಿಷ್ಠವಾಗಿವೆ ಎಂಬ ಭಾವನೆ ಮೂಡುತ್ತದೆ. ದೇಶದ ಲಕ್ಷಾಂತರ ಊರುಗಳಿಂದ ಬಡವ, ಶ್ರೀಮಂತ ಎನ್ನದೆ ಜಾತಿ, ಭಾಷೆ, ಪಂಥ, ಸಂಪ್ರದಾಯ, ಬೇಧ ಭಾವವನ್ನು ಮರೆತು ಕೋಟ್ಯಾಂತರ ಜನ ಪ್ರಯಾಗದಲ್ಲಿ ಸಂಗಮಿಸುತ್ತಿರುವುದು ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸುತ್ತಿದೆ.


ಈ ಕುಂಭಮೇಳದಲ್ಲಿ ಪೂಜ್ಯ ಸಾಧು ಸಂತರು, ಅಖಾಡಗಳು, ನಾಗ ಸಾಧುಗಳು, ಮಹಾ ಮಂಡಲೇಶ್ವರರು ಅದೇ ರೀತಿ ಧಾರ್ಮಿಕ ಸಂಘ ಸಂಸ್ಥೆಗಳು ಆಶ್ರಮಗಳು ನೂರಾರು ರೀತಿಯಲ್ಲಿ ಧಾರ್ಮಿಕ ಚಟುವಟಿಕೆ, ಪ್ರವಚನ, ಭಜನೆ ಸಂಕೀರ್ತನೆಗಳು, ಪುರಾಣ ನಾಟಕಗಳು, ಸತ್ಸಂಗದ ಮುಖಾಂತರ ಭಕ್ತರನ್ನು ಧರ್ಮ ಜಾಗೃತಿಯ ಕಡೆ ಕೊಂಡೊಯ್ಯುತ್ತಿದ್ದಾರೆ. ಇದರ ಜೊತೆಗೆ ಬಂದ ಕೋಟ್ಯಂತರ ಭಕ್ತರಿಗೆ ಹಲವಾರು ಕಡೆ ಊಟ ಪ್ರಸಾದ ವ್ಯವಸ್ಥೆ ಮಾಡುತ್ತಿರುವುದು, ಭಾರತದ ಅತಿಥಿ ಸತ್ಕಾರದ ಪ್ರತ್ಯಕ್ಷ ದರ್ಶನವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ತನಕ ತಲೆಯ ಮೇಲೆ ಬಟ್ಟೆಗಂಟುಗಳನ್ನು ಹಾಗೂ ತಾಯಂದಿರು ಸೊಂಟದಲ್ಲಿ ಸಣ್ಣ ಮಕ್ಕಳನ್ನು ಹೊತ್ತು ಕಿಲೋಮೀಟರ್ ಗಟ್ಟಲೆ ಅವರವರ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ನಡೆದುಕೊಂಡು ಬಂದು ಪುಣ್ಯ ತೀರ್ಥ ಸ್ನಾನದಲ್ಲಿ ಭಾಗವಹಿಸಿ ಧನ್ಯತೆಯನ್ನು ಅನುಭವಿಸಿ ಹಿಂದಿರುಗುವುದನ್ನು ನೋಡುವಾಗ ಇಂತಹ ಭಕ್ತಿಯ ದರ್ಶನವು ಹಿಂದುಗಳಿಗೆ ಬಿಟ್ಟು ಇನ್ನಾರಿಗೆ ಸಿಗಬಲ್ಲುದು? ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೊಂದಿಲ್ಲ. ಪುಣ್ಯ ಸ್ನಾನವನ್ನು ಮುಗಿಸಿ ಹಂಚಲೆಂದು ಗಂಗಾ ಜಲವನ್ನು ಬಾಟಲ್ ಹಾಗೂ ಕ್ಯಾನ್‌ಗಳಲ್ಲಿ ತುಂಬಿಸಿ ಹಿಡಿದು ಮೇಳಕ್ಕೆ ಬಾರದವರು ಗಂಗೆಯನ್ನು ಪಡೆಯಲಿ ಎಂದು ಮರಳಿ ಹೋಗುತ್ತಿರುವುದು ನೋಡಿದಾಗ ತಾಯಿ ಗಂಗೆಯು ಇಂದಿಗೂ ಈ ನೆಲದ ಪಾವಿತ್ರತೆಯನ್ನು ಧಾರ್ಮಿಕತೆಯನ್ನು ಸಾಬೀತು ಮಾಡಿತ್ತಿದ್ದಾಳೆ ಎಂದೆನಿಸಿತು.


ಮಂಗಳೂರು ಸೇರಿದಂತೆ ಉಳಿದ ಕರ್ನಾಟಕದ ನಾನಾ ಊರಿನಿಂದ ಬಂದಂತಹ ನೂರಾರು ಭಕ್ತರನ್ನು ಹೆಜ್ಜೆ ಹೆಜ್ಜೆಗೂ ಕಂಡು ಮಾತನಾಡಿಸಿ ನಾನು ಧನ್ಯನಾದೆ. ಈ ರಾಷ್ಟ್ರ ಅಖಂಡವೆನ್ನಲು ಇನ್ನೇನು ಬೇಕು? ಸರಕಾರದ ಕಡೆಯಿಂದ ಅಚ್ಚುಕಟ್ಟಾದ ವ್ಯವಸ್ಥೆಯಲ್ಲಿ ಪೋಲೀಸ್, ಸೈನಿಕರು, ಸ್ವಚ್ಛತೆ ಕಾರ್ಮಿಕರು, ಸ್ವಯಂ ಸೇವಕರು ರಾತ್ರಿ ಹಗಲು ಎನ್ನದೆ ಮಾಡುತ್ತಿರುವ ಕೆಲಸದಲ್ಲಿ ಅವರ ಧಾರ್ಮಿಕ ಶ್ರದ್ಧೆಯು ಎದ್ದು ಕಾಣುತ್ತಿತ್ತು. ಕಳೆದ ಒಂದು ವಾರದಿಂದ ಪ್ರಯಾಗ ರಾಜನಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪರಿಷದ್ ಕೇಂದ್ರಿಯ ಬೈಠಕ್‌ನಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಕುಂಭಮೇಳದ ಈ ಎಲ್ಲಾ ದೃಶ್ಯಗಳನ್ನು ನೋಡಿ ಪುನೀತಗೊಂಡೆ. ಸಂಪೂರ್ಣ ಭಾರತವನ್ನು ಕಂಡೆ. ಅಷ್ಟೇ ಅಲ್ಲ ಮನದಲ್ಲಿ ಹೃದಯದಲ್ಲಿ ಅದು ಅಷ್ಟೊತ್ತಿದ ಅನುಭವವಾಯಿತು. ಜಗತ್ತಲ್ಲಿ ಏಳು ಅದ್ಭುತಗಳಿವೆ ಎಂದು ಹೇಳುತ್ತಾರೆ ಆದರೆ ನನ್ನ ಪ್ರಕಾರ ಕುಂಭಮೇಳಕ್ಕಿಂತ ಅದ್ಭುತವು ಜಗತ್ತಲ್ಲಿ ಇನ್ನೊಂದಿರಲು ಸಾಧ್ಯವಿಲ್ಲ. ನಮ್ಮ ಜೀವಿತ ಕಾಲದಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವುದು ನಮ್ಮೆಲ್ಲರ ಪುಣ್ಯವೇ ಸರಿ. ಫೆಬ್ರವರಿ 12ರ ಮಾಘ ಹುಣ್ಣಿಮೆಯ ಅಮೃತ (ಶಾಹಿ) ಸ್ನಾನ ಮಾಡುವುದರೊಂದಿಗೆ ಆ ಒಂದು ವಾರದಲ್ಲಿ ಪದೇ ಪದೇ ಪುಣ್ಯ ತೀರ್ಥ ಸ್ನಾನವನ್ನು ಮಾಡಿ ಭಾರತ ಮತ್ತು ಹಿಂದು ಧರ್ಮವು ಲೋಕೋತ್ತರವಾಗಿ ಬೆಳಗಲಿ ಎಂದು ಅನನ್ಯ ಮನಸ್ಸಿನಿಂದ ಪ್ರಾರ್ಥಿಸಿದೆ.


(ಭಾವಚಿತ್ರಗಳು ರಕ್ಷಾಪುಟ 2ರ ಕುಂಭದಲ್ಲಿ ಕರ್ನಾಟಕದ ಕಾರ್ಯಕರ್ತರು)


ಮಹಾಕುಂಭ

ಮಹಾಕುಂಭದಲ್ಲಿ ಪಾಕಿಸ್ತಾನದ ಹಿಂದುಗಳು


ಮಹಾಕುಂಭದಲ್ಲಿ ಪಾಲ್ಗೊಂಡು ಸಂಗಮದಲ್ಲಿ ಸ್ನಾನ ಮಾಡಲೆಂದು ಪಾಕಿಸ್ತಾನದಿಂದ 72 ಭಕ್ತರ ತಂಡವೊಂದು ಬಂದಿದೆ. ಇಂತಹ ಬೃಹತ್ ಮೇಳವನ್ನು ಜೀವನದಲ್ಲೇ ಕಾಣದ ಈ ತಂಡದ ಸದಸ್ಯರು ತಮ್ಮ ಅನುಭವನ್ನು ಶಬ್ದಗಳಲ್ಲಿ ವರ್ಣಿಸಲು ಪ್ರಯಾಸಪಟ್ಟರು. ಸಿಂದ್ ಪ್ರಾಂತದಿಂದ ಬಂದ ಮಖಿಜಾ 'ದೈವಿಕ ಅನುಭವಕ್ಕೂ ಮೀರಿದೆ' ಎಂದರೆ ಗೋಟ್ಟಿಯಿಂದ ಬಂದ ಮುಖೇಶ್ ಇಂತಹ ಅಗಾಧ ಧಾರ್ಮಿಕ ಕೂಟದಿಂದ ದಿಗ್ಧಾಂತರಾದಂತಿತ್ತು. ಗೃಹಿಣಿ ಕರಿಷ್ಮಾ, ನಿರಂತರವಾಗಿ ನಡೆಯುವ ಭಜನೆ ಮತ್ತು ಕಾಷಾಯಧಾರಿ ಬೈರಾಗಿಗಳ ದರ್ಶನದಿಂದ ಪ್ರಭಾವಿತರಾಗಿದ್ದರು. ಕರಾಚಿಯ ಡಾ|ಸೋನಿಯಾ ವೈದ್ಯಕೀಯ ವಿದ್ಯಾರ್ಥಿ ದಿಯಾ ಶರ್ಮಾ ಅಸಂಖ್ಯ ವ್ಯವಸ್ಥೆ ಅದ್ಭುತ ಎಂದರು. ಸಕ್ಕಾರ್‌ನಿಂದ ಆಗಮಿಸಿದ ಸಮರ್ಥಿಸುತ್ತಾ ಸಿಂಧ ಪ್ರಾಂತದಲ್ಲಿ ಬಹಳ ಮಂದಿ ಈ . - ಕುಲದೀಪ್ ರಾವಲ್


ಕುಂಭಮೇಳದ ಅಮೃತ ಅನುಭವಗಳು


- - ಬಿ.ಇ. ಸುರೇಶ, ಬೆಂಗಳೂರು


“ಭೂಮಿಯ ಮೇಲಿನ ಅತ್ಯಂತ ದೊಡ್ಡ ಮಾನವ ಕೂಟ. ಹಿಂದೂಗಳಿಗೆ ಅತ್ಯಂತ ದೊಡ್ಡ ಧಾರ್ಮಿಕ ಸಭೆ. ಇದು ಶುದ್ಧ ಸಂತೋಷ ಮತ್ತು ಆನಂದಮಯ. ಇಲ್ಲಿ ಪ್ರಾಣಿ ಬಲಿ ಇಲ್ಲ, ರಕ್ತಪಾತವಿಲ್ಲ, ಹಿಂಸೆ ರಾಜಕೀಯವಿಲ್ಲ, ಮತಾಂತರವಿಲ್ಲ, ಪಂಥಗಳಿಲ್ಲ, ತಾರತಮ್ಯವಿಲ್ಲ, ವ್ಯಾಪಾರವಿಲ್ಲ, ವ್ಯವಹಾರವಿಲ್ಲ. ಇದುವೆ ಹಿಂದೂ ಧರ್ಮ. ಧರ್ಮ, ಕ್ರೀಡೆ, ಯುದ್ಧ, ಅಂತ್ಯಕ್ರಿಯೆ ಅಥವಾ ಹಬ್ಬಗಳಿರಲಿ, ಯಾವುದೇ ಕಾರ್ಯಕ್ರಮಕ್ಕಾಗಿ ಬೇರೆಲ್ಲಿಯೂ ಮನುಷ್ಯರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಟ್ಟುಗೂಡಿಲ್ಲ ಮತ್ತು ಮುಂದೆಯೂ ಒಟ್ಟುಗೂಡಲಾರರು.


ಈ ಅಂಕಿ ಅಂಶಗಳಿಂದ ಜಗತ್ತೇ ಬೆರಗಾಗಿದೆ 44 ದಿನಗಳವರೆಗೆ 60 ಕೋಟಿ ಜನರು ಅದೂ ಮೊದಲ ದಿನ 1.5 ಕೋಟಿಗಿಂತಲೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡುತ್ತಾರೆ. ಅಷ್ಟಲ್ಲದೆ 4,000 ಹೆಕ್ಟೇರ್‌ಗಳಲ್ಲಿ ಹರಡಿರುವ ನಗರ, 1,50,000 ಡೇರೆಗಳು, 3,000 ಅಡುಗೆಮನೆಗಳು, 1,45,000 ಶೌಚಾಲಯಗಳು, 40,000 ಭದ್ರತಾ ಸಿಬ್ಬಂದಿ, 2,700 AI ಸಕ್ರಿಯಗೊಳಿಸಿದ ಕ್ಯಾಮೆರಾಗಳ ಈ ಅಂಕಿ ಅಂಶಗಳು ಖಂಡಿತವಾಗಿಯೂ ಅದ್ಭುತವಾಗಿವೆ. ಆದರೆ ನನಗೆ ಹೆಚ್ಚು ಆಶ್ಚರ್ಯವನ್ನುಂಟುಮಾಡುವುದು ಇದಲ್ಲ. ನನ್ನ ಆಶ್ಚರ್ಯವು ಭೌತಿಕತೆ, ಸಂಖ್ಯೆಗಳು ಅಥವಾ ದೃಶ್ಯಗಳಲ್ಲ. ಇದು ಗೋಚರ ವಸ್ತುಗಳ ವಿಷಯವಲ್ಲ, ಇದು ಗಾತ್ರ ಅಥವಾ ಸಂಖ್ಯೆಗಳ ವಿಷಯವಲ್ಲ. ಮಾನವ ಮತ್ತು ಬ್ರಹ್ಮಾಂಡದ ನಡುವಿನ ಸಂಬಂಧದ ಬಗ್ಗೆ ಪ್ರಾಚೀನ ಜ್ಞಾನವು ನನ್ನನ್ನು ಆಶ್ಚರ್ಯಗೊಳಿಸುತ್ತದೆ. ಈ ಕುಂಭಮೇಳದ ಪ್ರತಿಯೊಂದು ಆಚರಣೆಯು ಮಾನವ ಜೀವನದ ಮೇಲೆ, ಭೌತಿಕ ಮತ್ತು ಆಧ್ಯಾತ್ಮಿಕ ಪ್ರಭಾವ ಬೀರುವ ಗ್ರಹಗಳು, ನಕ್ಷತ್ರಪುಂಜಗಳು ಮತ್ತು ಬ್ರಹ್ಮಾಂಡದ ಚಲನಶೀಲತೆಯೊಂದಿಗೆ ಸಂಪರ್ಕ ಹೊಂದಿದೆ. ಇದರಲ್ಲಿ ಯಾವುದೇ ಅಧಿಕಾರ ಅಥವಾ ರಾಜಕೀಯದ ಮಾತಿಲ್ಲ. ಆಧುನಿಕ ವಿಜ್ಞಾನವನ್ನೂ ಮೀರಿ, ಹಿಂದೂ ಧರ್ಮದಲ್ಲಿ ಮಾನವೀಯತೆ ಮತ್ತು ಬ್ರಹ್ಮಾಂಡದ ನಡುವಿನ ಸಂಬಂಧದ ಆಳವಾದ ಅಧ್ಯಯನವು ಇಲ್ಲಿ ನಡೆಯುತ್ತಿದೆ. ಹಿಂದೂ ಧರ್ಮದ ಜ್ಞಾನವು ಅತೀಂದ್ರಿಯ ಸಂದರ್ಭಗಳು ಮತ್ತು ಸಂಬಂಧಗಳನ್ನು ಹೊಂದಿದೆ ಎಂದು ತೋರಿಸುತ್ತದೆ. ಹಿಮಾಲಯದ ಸನ್ಯಾಸಿಗಳ ಪ್ರಜ್ಞೆಯು ಕಾಲ ಮತ್ತು ಅವಕಾಶ ಮಿತಿಗಳನ್ನು ಮೀರಬಲ್ಲದು. ಅದು 'ನಾನು ಮತ್ತು ಬ್ರಹ್ಮಾಂಡದ ದ್ವಂದ್ವತೆಯನ್ನು ಮುರಿಯಬಲ್ಲುದು. ನಾವು ಕೇವಲ ಭೌತಿಕ ದೇಹವಲ್ಲ, ಶುದ್ಧ ಪ್ರಜ್ಞೆ ನಾವು. ಕೇವಲ ಭೌತಿಕ ಅನುಭವವನ್ನು ಹೊಂದಿರುವ ಆತ್ಮವಾಗಿ ಅರ್ಥಮಾಡಿಕೊಂಡ ನಂತರ, ನಾವು ಅನಂತರಾಗುತ್ತೇವೆ. ಹಿಮಾಲಯದ ಸನ್ಯಾಸಿಗಳು ಮತ್ತು ಕ್ವಾಂಟಮ್ ಭೌತಶಾಸ್ತ್ರಜ್ಞರು ಜ್ಞಾನದ ಸಾಗರದಲ್ಲಿ ಒಟ್ಟಿಗೆ ಪವಿತ್ರ ಸ್ನಾನ ಮಾಡಿದಾಗ, ಹಿಂದೂ ಧರ್ಮವು ಪ್ರಕೃತಿಯೊಂದಿಗೆ ಸಾಮರಸ್ಯ


ಮಾತ್ರವಲ್ಲ, ಹಿಂದೂ ಧರ್ಮವು ಪ್ರಕೃತಿಯೇ ಆಗಿದೆ ಎನ್ನುವುದು ವಿದಿತವಾಗುತ್ತದೆ.


ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾ


ಗಂಗಾವತರಣ


- ಟಿ.ಎ.ಪಿ. ಶೆಣೈ


ಉತ್ತಾರಾಖಂಡದಲ್ಲಿ ಶ್ರೀ ಬದರಿನಾಥದ ಉತ್ತರದಲ್ಲಿ ನಂದಾದೇವಿ ಪರ್ವತದ ನಿತಿ ಕಣಿವೆಯಲ್ಲಿ ಸುಮಾರು 4700 ಮೀಟರ್ ಎತ್ತರದ ಹಿಮಶಿಖರದಲ್ಲಿ ಧವಳ ಗಂಗಾನದಿ ಉಗಮಿಸುತ್ತದೆ. ಅದು ಚಮೋಲಿ ಜಿಲ್ಲೆಯಲ್ಲಿ ಹರಿದು ದಕ್ಷಿಣಾಭಿಮುಖವಾಗಿ ಮುಂದುವರೆಯುತ್ತದೆ. ಅದೇರೀತಿ ಮನಾ ಪರ್ವತದಲ್ಲಿ ಉಗಮಿಸಿದ ವಿಷ್ಣು ಗಂಗೆಯೊಂದಿಗೆ ಈ ಧವಳಗಂಗೆಯು ಸಂಗಮಿಸುತ್ತದೆ. ಗಂಗಾನದಿಯ ಹರಿವಿನಲ್ಲಿ ಸಂಭವಿಸುವ ಈ ಮೊದಲ ಸಂಗಮ ಕ್ಷೇತ್ರವನ್ನು ವಿಷ್ಣು ಪ್ರಯಾಗ ಎಂದು ಕರೆಯುತ್ತಾರೆ. ವಿಷ್ಣು ಪ್ರಯಾಗದಿಂದ ಎರಡು ನದಿಗಳು ಸಂಗಮಿಸಿ ಮುಂದುವರಿದು ಹರಿಯುವ


ಪ್ರವಾಹವನ್ನು ಅಲಕಾನಂದಾ ನದಿಯೆಂದು ಹೆಸರಿಸಿದ್ದಾರೆ. ಅಲಕಾನಂದ ನದಿಯು ಹರಿದು ಮುಂದುವರೆಯುವಾಗ ಅದರ ಎಡಗಡೆಯಿಂದ ಬಂದು ಸೇರುವ ನದಿ ನಂದಾಕಿನಿಯು ನಂದಾ ಘಂಟಿಯಲ್ಲಿ ಉಗಮಿಸಿ ಬಂದಿರುತ್ತದೆ. ಈ ಎರಡನೆ ಸಂಗಮವು ನಂದ ಪ್ರಯಾಗ.


ಅಲ್ಲಿಂದ ಮುಂದುವರೆಯುವ ಅಲಕಾನಂದ ನದಿಗೆ ಪಿಂಡಾರ ನದಿಯು ಬಂದು ಸೇರುತ್ತದೆ. ಇದು ಬಾಗೇಶ್ವರ ಜಿಲ್ಲೆಯ ಪಿಂಡಾರಿ ಹಿಮಪರ್ವತದಿಂದ ಹುಟ್ಟಿ ಬರುತ್ತದೆ.


ಮಹಾಕುಂಭ

ಉತ್ತರಾ ಖಂಡದ ಕುಮಾಂವ್ ಪ್ರದೇಶದಲ್ಲಿ ಉಗಮಿಸುವ ಈ ನದಿಯು ಅಲಕಾನಂದ ನದಿಯೊಡನೆ ಸಂಗಮಿಸುವ ಈ ಕ್ಷೇತ್ರವು ಕರ್ಣ ಪ್ರಯಾಗ,


ಇಲ್ಲಿಂದ ಮುಂದುವರಿದ ಅಲಕಾನಂದ ನದಿಯೊಂದಿಗೆ ಕೇದಾರನಾಥ ಶಿಖರದ ಚೋರಾಬಾಡಿ ಹಿಮವತ್ಪರ್ವತದಲ್ಲಿ ಹುಟ್ಟಿ ಬರುವ ಮಂದಾಕಿನಿ ನದಿಯು ಬಂದು ಸಂಗಮಿಸುತ್ತದೆ. ಉಖಿಮಠದ ಬಳಿಯ ಈ ಕ್ಷೇತ್ರವೇ ರುದ್ರ ಪ್ರಯಾಗ.


ಈಗ ಮುಂದೆಯೂ ಅಲಕಾನಂದ ಎಂದೇ ಹೆಸರನ್ನು ಉಳಿಸಿಕೊಂಡ ನದಿಯು ಹರಿಯುತ್ತಾ ಹೋಗುತ್ತಿದ್ದಂತೆ ಉತ್ತರ ಕಾಶಿಯ ಗಂಗೋತ್ರಿ ಗೋಮುಖದಿಂದ ಉಗಮಿಸಿ ಬರುವ ಭಾಗೀರಥಿ ನದಿಯು ಅಲಕಾನಂದೆಯೊಡನೆ ಸೇರುತ್ತಾಳೆ. ಈ ಕ್ಷೇತ್ರವನ್ನು ದೇವಪ್ರಯಾಗವೆಂದು ಕರೆಯುತ್ತಾರೆ.


ಹೀಗೆ ಹೆಸರಿಸಿದ ಐದು ಪ್ರಯಾಗಗಳನ್ನು ಪಂಚ ಯಾಗಗಳೆಂದು ಹೇಳುತ್ತಾರೆ. ಇಲ್ಲಿಂದ ಮುಂದಿನ ಪ್ರವಾಹವನ್ನು ಪವಿತ್ರ ಗಂಗಾನದಿಯೆಂದು ಹೇಳುತ್ತಾರೆ. ಹೀಗೆ ಪರ್ವತ ಕಣಿವೆಗಳಿಂದ ಇಳಿದು ಹಲವು ಉಪನದಿಗಳೊಂದಿಗೆ ಮೈತುಂಬಿ ಮೈದಾನ ಪ್ರದೇಶಕ್ಕೆ ಬಂದು ಶಾಂತವಾಗಿ ಹರಿಯುವ ಗಂಗೆ, ಹೃಷಿಕೇಶವನ್ನು ಮುಟ್ಟುತ್ತಾಳೆ. ಅಲ್ಲಿಂದ ಹರಿದ್ವಾರ ವನ್ನು ದಾಟಿ ಮುಂದೆ ಬರುವಾಗ ಗಂಗೆಯ ಅತಿ ದೊಡ್ಡ ಉಪನದಿ ಯಮುನೆಯ ಆಗಮನವಾಗುತ್ತದೆ. 4500 ಮೀಟರ್ ಎತ್ತರದ ಯಮುನೋತ್ರಿ ಹಿಮಪರ್ವತದಿಂದ ಉಗಮಿಸಿ ಯಮುನೆ ನೈಋತ್ಯ ಮುಖಿಯಾಗಿ ಹರಿದು ಗಂಗೆಯೊಂದಿಗೆ ಸೇರುತ್ತಾಳೆ. ಇದುವೆ ಎಲ್ಲಾ ಪ್ರಯಾಗಗಳಿಗೆ ರಾಜ ಸಮಾನವಾದ ಪ್ರಯಾಗರಾಜ.


ಎಲ್ಲಾ ಅಲೋಚನೆಗಳನ್ನು ನೀವು ಬಾಯಿಬಿಟ್ಟು ಹೇಳಬೇಕಿಲ್ಲ. ಮನಸ್ಸಿನಲ್ಲಿ ಆಲೋಚನೆಗಳು ಬಂದರೆ ಸಾಕು. ವಿಶ್ವಶಕ್ತಿಯತ್ತ ಅವು ಧಾವಿಸುತ್ತವೆ. ನಿಮ್ಮ ಮನಸ್ಸಿನ ಆಲೋಚನೆಗಳು ಕೇವಲ ಆಲೋಚನೆಗಳಾಗಿ ಉಳಿಯುವುದಿಲ್ಲ. ಅವು ಕ್ರಮೇಣ ಭಾವನೆಗಳಾಗುತ್ತವೆ. ಭಾವನೆಗಳಿಗೆ ಅಪಾರ ಶಕ್ತಿಯಿರುತ್ತದೆ. ಆಲೋಚನೆಗಳು ಮತ್ತು ಭಾವನೆಗಳು ಸೇರಿ ಕ್ರಿಯೆ ಅಂದರೆ ಕೆಲಸವಾಗುತ್ತದೆ. ಕೆಲಸದಿಂದ ಫಲಿತಾಂಶ ದೊರಕುತ್ತದೆ. ಇಂದಿನಿಂದ ನಿಮಗೆ ಹಣದ ಬಗೆಗೆ ಇರುವ ಆಲೋಚನೆಯೇ ಭಾವನೆಯಾಗಿ ಅದೇ ಕೆಲಸವಾಗಿ ಫಲಿತಾಂಶವಾಗುತ್ತದೆ. ನಿಮ್ಮ ಅಲೋಚನೆ ಧನಾತ್ಮಕವಾಗಿದ್ದರೆ ಭಾವನೆಗಳು ಧನಾತ್ಮಕವಾಗಿರುತ್ತವೆ. ಹಾಗೆಯೇ ಕೆಲಸ ನಡೆದು ಧನಾತ್ಮಕ ಫಲಿತಾಂಶ ದೊರಕುತ್ತದೆ. ಇದೊಂದು ಬಹುಮುಖ್ಯ ಕಲ್ಪನೆ. ಇದನ್ನು ನೀವು ಅರ್ಥಮಾಡಿಕೊಳ್ಳಬೇಕು.



ಕುಂಭಮೇಳದಲ್ಲಿ ನಡೆದ ಕೇಂದ್ರೀಯ ಬೈಠಕ್‌ನಲ್ಲಿ ಕೈಗೊಂಡ ನಿರ್ಣಯಗಳು ಜನಸಂಖ್ಯಾ ಅಸಮತೋಲನ, ಸಂಸ್ಕಾರಗಳ ಕ್ಷೀಣತೆ ಮತ್ತು ಮಾದಕ ದ್ರವ್ಯಗಳ ವಿರುದ್ಧ


ಫೆಬ್ರವರಿ 7, 2025: ವಿಶ್ವ ಹಿಂದೂ ಪರಿಷದ್ ಕೇಂದ್ರೀಯ ಪ್ರನ್ಯಾಸಿ ಮಂಡಲ ಬೈಠಕ್‌ನ ದ್ವಿತೀಯ ಅವಧಿಯ ಅಂಗೀಕೃತವಾದ ನಿರ್ಣಯದಲ್ಲಿ, ಹಿಂದೂಗಳ ಇಳಿಯುತ್ತಿರುವ ಜನಸಂಖ್ಯಾ ಪ್ರಮಾಣ, ಹಿಂದೂ ಕುಟುಂಬಗಳ ವಿಭಜನೆ, ಲಿವ್-ಇನ್ ಸಂಬಂಧಗಳು ಹಾಗೂ ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಯ ಕುರಿತು ತೀವ್ರ ಚಿಂತೆಯನ್ನು ವ್ಯಕ್ತಪಡಿಸಿದೆ. ದೇಶದ ಯುವ ಪೀಳಿಗೆಗೆ ಈ ಸಮಸ್ಯೆಗಳು ಹಿಂದೂ ಸಮಾಜಕ್ಕೆ ಸವಾಲಾಗಿ ಪರಿಣಮಿಸಿರುವುದನ್ನು ವಿವರಿಸಿ, ಇವುಗಳಿಗೆ ಉತ್ತರ ನೀಡುವುದು ಅವರ ಜವಾಬ್ದಾರಿ ಎಂದು ಹೇಳಲಾಗಿದೆ.


ಪರಿಷತ್ತಿನ ಸಹ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಅವರು ಇಂದು ಪ್ರಯಾಗರಾಜದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ದೇಶವು ಎದುರಿಸುವ ಪ್ರತಿಯೊಂದು ಸವಾಲಿಗೂ ಹಿಂದೂ ಯುವಶಕ್ತಿ ಸದಾ ಸಮರ್ಥ ಉತ್ತರ ನೀಡಿದೆಯೆಂದು ತಿಳಿಸಿದರು. ಹಿಂದೂಗಳ ಇಳಿಯುತ್ತಿರುವ ಜನಸಂಖ್ಯೆ ಹಿಂದೂ ಸಮಾಜದ ಅಸ್ತಿತ್ವಕ್ಕೆ ಅನಾಹುತಕರವಾಗಿದೆ. ಹಿಂದೂ ಜನಸಂಖ್ಯೆಯ ಇಳಿಕೆಯು ಬಹು ಆಯಾಮದಲ್ಲಿ ಪರಿಣಾಮ ಬೀರುತ್ತದೆ. ಹಿಂದೂಗಳು ಈ ದೇಶವನ್ನು ಸಂಕೇತವನ್ನು ಪ್ರತಿನಿಧಿಸುತ್ತಾರೆ. ಹಿಂದೂ ಜನಸಂಖ್ಯೆ ಕಡಿಮೆಯಾಗುತ್ತಿರುವುದು ದೇಶದ ಗುರುತು ಮತ್ತು ಅಸ್ತಿತ್ವಕ್ಕೂ ಅಪಾಯ ತರುತ್ತಿದೆ. ಈ ಪರಿಸ್ಥಿತಿಯನ್ನು ತಡೆಯಲು ಹಿಂದೂ ಯುವಕರು ಮುಂದಾಗಬೇಕು.

ಮಹಾಕುಂಭ

ಅವರು ಮುಂದುವರೆದು, ತಡವಾಗಿ ಮದುವೆಯಾಗುವ ಮತ್ತು ಭವಿಷ್ಯದ ಭ್ರಮೆಯ ಕಲ್ಪನೆಗಳ ಕಾರಣದಿಂದ ಹಿಂದೂ ದಂಪತಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು. 25 ವರ್ಷ ವಯಸ್ಸಿನಲ್ಲಿ ಮದುವೆಯಾಗುವುದು ಇಂದಿನ ಅವಶ್ಯಕತೆಯಾಗಿದೆ ಎಂದು ವಿಶ್ವ ಹಿಂದು ಪರಿಷದ್ ಕರೆ ನೀಡುತ್ತದೆ. ಡಾ. ಜೈನ್ ಅವರು ಹಲವು ವೈಜ್ಞಾನಿಕ ಅಧ್ಯಯನಗಳು ತೋರಿಸಿದಂತೆ, ಪ್ರತಿ ಕುಟುಂಬದಲ್ಲಿ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಕನಿಷ್ಠ ಎರಡು ಅಥವಾ ಮೂರು ಮಕ್ಕಳಿರಬೇಕು ಎಂದು ಹೇಳಿದರು.


ಪ್ರಸ್ತಾವದಲ್ಲಿ ಹೇಳಿರುವಂತೆ, ಇಂದು ಹಿಂದೂ ಸಂಸ್ಕಾರಗಳ ಕೊರತೆಯಿಂದ ಕುಟುಂಬ ವ್ಯವಸ್ಥೆಯೇ ಸಂಕಷ್ಟಕ್ಕೊಳಗಾಗಿದೆ. ಪಾಶ್ಚಾತ್ಯ ಭೌತಿಕತೆಯ ಪ್ರಭಾವ, ನಗರ ನಕ್ಸಲ್ ಸಂಚು ಮತ್ತು ಜಾಗತಿಕ ಕಾರ್ಪೊರೇಟ್ ಗುಂಪುಗಳು ಮಾಧ್ಯಮ, ಜಾಹೀರಾತುಗಳ ಮೂಲಕ ಯುವಕರಿಗೆ ಭ್ರಮೆ ಮೂಡಿಸುತ್ತಿವೆ ಮತ್ತು ಸಂಸ್ಕಾರವಿಲ್ಲದವರನ್ನಾಗಿಸುತ್ತಿವೆ. ಇದರಿಂದ ವಿವಾಹೇತರ ಸಂಬಂಧಗಳು ಮತ್ತು ಲಿವ್-ಇನ್ ಸಂಬಂಧಗಳು ಹೆಚ್ಚುತ್ತಿವೆ.


ಪರಿಷದ್ ಯುವಕರಲ್ಲಿ ತಮ್ಮ ಮೂಲಕ್ಕೆ ಹಿಂತಿರುಗಿ, ಸುಖಮಯ ಕುಟುಂಬ ಜೀವನವನ್ನು ಖಚಿತಗೊಳಿಸುವಂತೆ, ಮಕ್ಕಳಿಗೆ ಮತ್ತು ಹಿರಿಯರಿಗೆ ಸಾಮಾಜಿಕ ಹಾಗೂ ಭಾವನಾತ್ಮಕ ಭದ್ರತೆಯನ್ನು ಒದಗಿಸಲು ಕರೆ ನೀಡಿದೆ.


ಇದೇ ವೇಳೆ ದೇಶದಲ್ಲಿ ಹೆಚ್ಚುತ್ತಿರುವ ನಶೆಯ ಪ್ರವೃತ್ತಿಯ ಬಗ್ಗೆ ಪರಿಷದ್ ಆತಂಕ ವ್ಯಕ್ತಪಡಿಸಿದೆ. 16 ಕೋಟಿ ಜನರು ನಶೆಗೆ ಬಲಿಯಾಗಿರುವುದು ಈ ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ. ಯುವಕರಿಗೆ ಮಾದಕದ್ರವ್ಯದ ಆತ್ಮಘಾತಕ ಪ್ರವೃತ್ತಿಯಿಂದ ದೂರವಿರುವಂತೆ ಕರೆ ನೀಡಿದ ಸಭೆಯು, ತಮ್ಮ ಶಿಕ್ಷಣ ಸಂಸ್ಥೆ, ನಗರ ಮತ್ತು ಪ್ರಾಂತವನ್ನು ನಶೆಯಿಂದ ಮುಕ್ತಗೊಳಿಸಲು ಬಜರಂಗದಳ, ದುರ್ಗಾವಾಹಿನಿ ಮತ್ತು ಇತರ ಸಂಘಟನೆಗಳ ಸಹಕಾರವನ್ನು ಪಡೆಯಲು ಒತ್ತಾಯಿಸಿದೆ. ಪರಿಷದ್, ಸರ್ಕಾರಗಳಿಗೆ ನಶೆ ವ್ಯಾಪಾರದಲ್ಲಿ ತೊಡಗಿರುವ ಮಾಫಿಯಾ ಮತ್ತು ಉಗ್ರರ ಜಾಲದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲು ಮತ್ತು ಕಠಿಣ ಕಾನೂನುಗಳನ್ನು ತಂದು ಪೂರ್ಣ ನಿಷೇಧ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಪರಿಷದ್ ತನ್ನ ಲಕ್ಷಾಂತರ ಘಟಕಗಳು, ಸತ್ಸಂಗ ಮತ್ತು ಸಂಸ್ಕಾರ ಶಾಲೆಗಳ ಮೂಲಕ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ಯುವ ಶಕ್ತಿಗೆ ಈ ಶಕ್ತಿಗಳ ಮೇಲೆ ನಿಯಂತ್ರಣ ತರಲು ಕರೆ ನೀಡುವ ಸಂಕಲ್ಪವನ್ನು ಮಾಡಿಕೊಂಡಿದೆ.


ಮಹಾಕುಂಭ

ಜೈ ಶ್ರೀ ರಾಮ್