Logo

VHP PUBLICATIONS

Hindu Vani
expand_more

ಸಂಸ್ಕೃತಿ

ಹೆಸರಿನಲ್ಲಿದೆ ಸಂಸ್ಕೃತಿ

ಅಥರ್ವ : ಅಂಗೀರಸ ಋಷಿ ಮತ್ತು ಸತಿಯರ ಮಗ, ಈತನೂ ಮಹರ್ಷಿಯೆ. ಮುಂದೆ ಈತನು ಶಾಂತಿ ಅಥವಾ ಚಿತ್ತಿಯೆಂಬ ತರುಣಿಯನ್ನು ಮದುವೆಯಾದನು. ದಧಿಚಿಯೆಂಬ ಋಷಿ ಇವರ ಮಗ.

ಅತ್ರಿ : ಸಪ್ತ ಋಷಿಗಳಲ್ಲಿ ಒಬ್ಬರು. ಅನುಸೂಯೆಯನ್ನು ಮದುವೆಯಾದರು. ದತ್ತಾತ್ತೇಯ, ದುರ್ವಾಸ ಮತ್ತು ಚಂದ್ರರು ಈ ಋಷಿದಂಪತಿಗಳ ಮಕ್ಕಳು. ವನವಾಸದಲ್ಲಿ ಶ್ರೀರಾಮನಿಗೆ ಈ ಋಷಿ ದಂಪತಿಗಳು ಆತಿಥ್ಯವನ್ನು ನೀಡಿದರು.

ಅನಲಾ : ಕಾಮಧೇನುವಿನ ಮಗಳಾದ ರೋಹಿಣಿಯ ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣು ಮಗಳು.

ಅನಿರುದ್ಧ : ರುಕ್ಕಿಣಿ ಮತ್ತು ಶ್ರೀ ಕೃಷ್ಣರ ಮಗ ಪ್ರದ್ಯುಮ್ನನು ಅನಿರುದ್ಧನ ತಂದೆ. ಇವನ ಮಗ ವಜ್ರ, ಅನಿರುದ್ಧನ ಹೆಂಡತಿ ಉಷೆಯು ಬಾಣಾಸುರನ ಮಗಳು.

ಕಣ್ವ : ಈ ಋಷಿಯ ಆಶ್ರಮದಲ್ಲಿ ದುಷ್ಯಂತನ ಪತ್ನಿ ಶಕುಂತಲೆಯು ಬೆಳೆದಳು. ಈತನದ್ದು ಕಶ್ಯಪಗೋತ್ರ, ಇವನ ತಾಯಿ ಮೇಧಾತಿಥಿ, ಶಕುಂತಲೆಯನ್ನು ತನ್ನ ಶಿಷ್ಯರನ್ನು ಜೊತೆಗೂಡಿಸಿ ದುಷ್ಯಂತನ ಅರಮನೆಗೆ ಆಕೆಯನ್ನು ಕಳುಹಿಸಿಕೊಡುತ್ತಾರೆ.

ಗಾಲವ : ವಿಶ್ವಾಮಿತ್ರ ಋಷಿಯ ಶಿಷ್ಯ ಅವರಲ್ಲಿ ಶುಕ್ಲ ಯಜುರ್ವೇದವನ್ನು ಅಧ್ಯಯನ ಮಾಡಿದ ಋಷಿ,

ಚಿತ್ರಾಂಗದಾ : ಅರ್ಜುನನ ಹೆಂಡತಿ. ಇವರಿಬ್ಬರ ಮಗ ಬಭ್ರುವಾಹನ.

ಜಾಬಾಲಿ : ವಿಶ್ವಾಮಿತ್ರ ಋಷಿಯ ಒಬ್ಬ ಮಗ, ದಶರಥನ ಅಷ್ಟ ಪ್ರಧಾನರಲ್ಲಿ ಒಬ್ಬ ಚಿತ್ರಕೂಟದಲ್ಲಿ ಭರತನು ರಾಮನಿಗೆ ಅಯೋಧ್ಯೆಗೆ ಹಿಂದಿರುಗಿ ಬಾ ಎಂದು ಕರೆದಾಗ ರಾಮನು ನಿರಾಕರಿಸುತ್ತಾನೆ. ಆಗ ಈ ಜಾಬಾಲಿ ಮಂತ್ರಿಯು ರಾಮನಿಗೆ ಹಿರಿಯರು ಎನ್ನುವ ವಿಚಾರಗಳು ಈ ಕಾಲಕ್ಕೆ ಅನ್ವಯಿಸದು. ಆದುದರಿಂದ ಭರತನು ಕೇಳಿದಂತೆ ಅಯೋಧ್ಯೆಗೆ ಬರುವುದೇ ಉಚಿತ ಎಂದು ಸಲಹೆಯನ್ನು ಕೊಡುತ್ತಾನೆ.

ಜಾಂಬವತಿ : ಜಾಂಬವಂತನ ಮಗಳು. ಶ್ರೀಕೃಷ್ಣನನ್ನು ಮದುವೆಯಾದಳು. ಇವರಿಬ್ಬರ ಮಗ ಸಾಂಬ.

ದೇವದತ್ತ : ಇಂದ್ರನು ಅರ್ಜುನನಿಗೆ ಕೊಟ್ಟ ಶಂಖದ ಹೆಸರು.

ದೇವಯಾನಿ : ಶುಕ್ರಾಚಾರ್ಯರ ಮಗಳು.

ಧನ್ಯಾ : ಧ್ರುವನ ಹೆಂಡತಿ, ಇವರಿಬ್ಬರ ಮಗ ಶಿಷ್ಯ.

ಧರಣಿ : ದಕ್ಷನ ಹೆಂಡತಿ, ಇವರ ಮಕ್ಕಳ ಹೆಸರುಗಳು. ದಿತಿ, ಅದಿತಿ, ಸಿಂಹಿಕಾ ಮತ್ತು ಧೃತಿ.